ಉದ್ಧವ್ ಠಾಕ್ರೆ ಮೇಲೆ ಯಾವುದೇ ದೂರುಗಳಿಲ್ಲ; ಎನ್‌ಸಿಪಿ, ಕಾಂಗ್ರೆಸ್ ಕಾರ್ಯವೈಖರಿಯಿಂದ ಅಸಮಾಧಾನ: ಶಿವಸೇನೆ ಬಂಡಾಯ ಶಾಸಕರು
ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದ ಭಿನ್ನಮತೀಯರ ಪೈಕಿ ಒಬ್ಬರಾಗಿರುವ ಮಹಾರಾಷ್ಟ್ರದ ಶಿವಸೇನೆ ಸಚಿವರೊಬ್ಬರು, ಶಿವಸೇನಾ ನಾಯಕತ್ವದ ವಿರುದ್ಧ ನಮಗೆ ಯಾವುದೇ ದೂರುಗಳಿಲ್ಲ, ಆದರೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಕಾರ್ಯವೈಖರಿಯಿಂದ ಅಸಮಾಧಾನವಾಗಿದೆ ಎಂದು ಅವರು ಬುಧವಾರ ಹೇಳಿದ್ದಾರೆ.
Published: 22nd June 2022 12:20 PM | Last Updated: 22nd June 2022 01:23 PM | A+A A-

ಬಂಡಾಯ ಶಾಸಕರು
ಮುಂಬೈ: ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದ ಭಿನ್ನಮತೀಯರ ಪೈಕಿ ಒಬ್ಬರಾಗಿರುವ ಮಹಾರಾಷ್ಟ್ರದ ಶಿವಸೇನೆ ಸಚಿವರೊಬ್ಬರು, ಶಿವಸೇನಾ ನಾಯಕತ್ವದ ವಿರುದ್ಧ ನಮಗೆ ಯಾವುದೇ ದೂರುಗಳಿಲ್ಲ, ಆದರೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಕಾರ್ಯವೈಖರಿಯಿಂದ ಅಸಮಾಧಾನವಾಗಿದೆ ಎಂದು ಅವರು ಬುಧವಾರ ಹೇಳಿದ್ದಾರೆ.
ಬಂಡಾಯ ಶಾಸಕರ ನಡುವೆ ಇರುವ ಮಹಾರಾಷ್ಟ್ರ ಸಚಿವ ಸಂದೀಪನ್ ಭೂಮಾರೆ ಅವರು ದೂರವಾಣಿ ಮೂಲಕ ಟಿವಿ ಚಾನೆಲ್‌ನೊಂದಿಗೆ ಮಾತನಾಡಿದ್ದು, ಶಿವಸೇನೆ ನಾಯಕತ್ವದ ವಿರುದ್ಧ ನಮಗೆ ಯಾವುದೇ ದೂರುಗಳಿಲ್ಲ. ಎನ್‌ಸಿಪಿ ಮತ್ತು ಕಾಂಗ್ರೆಸ್ ಸಚಿವರೊಂದಿಗೆ ಕೆಲಸ ಮಾಡುವುದು ಕಷ್ಟವಾಗುತ್ತಿದೆ ಎಂದು ಈ ಕುರಿತು ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೂ ದೂರು ನೀಡಿದ್ದೆವು ಎಂದು ಹೇಳಿದ್ದಾರೆ.
ಎನ್'ಸಿಪಿ ಹಾಗೂ ಕಾಂಗ್ರೆಸ್ ಸಚಿವರಿಂದ ನಮ್ಮ ಪ್ರಸ್ತಾವನೆಗಳು ಹಾಗೂ ಕೆಲಸ ಕಾರ್ಯಗಳಿಗೆ ಅನುಮೋದನೆ ಪಡೆದುಕೊಳ್ಳುವುದು ಬಹಳ ಕಷ್ಟಕರವಾಗುತ್ತಿದೆ. ನನಗೆ ಸಚಿವ ಸ್ಥಾನ ನೀಡಿದ್ದಾರೆ. ಅದಕ್ಕೆ ನನಗೆ ತೃಪ್ತಿಯಿದೆ. ಜೀವನದಲ್ಲಿ ಇದಕ್ಕಿಂತಲೂ ಇನ್ನೇನು ಬೇಕು. ಆದರೆ, ಜನಪ್ರತಿನಿಧಿಯಾಗಿ ನನ್ನ ಜನರ ಕುಂದುಕೊರತೆಗಳನ್ನು ಪರಿಹರಿಸಬೇಕಾಗಿದೆ. ಈ ಎರಡು ಮೈತ್ರಿ ಪಾಲುದಾರರಿಂದ ನಾನು ಅದನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ: ಸರ್ಕಾರ ಪತನದ ಸುಳಿವು ನೀಡಿದ ಸಂಜಯ್ ರಾವತ್
ಇದೇ ವೇಳೆ ಬಂಡಾಯ ಶಾಸಕರದಲ್ಲಿ ಇರುವ ಮತ್ತೊಬ್ಬ ನಾಯಕ ಸಂಜಯ್ ಶಿರ್ಸಾತ್ ಅವರು ಮಾತನಾಡಿ, ಪಕ್ಷದ 35 ಶಾಸಕರು ಗುವಾಹಟಿಯಲ್ಲಿದ್ದಾರೆ. ಮತ್ತಷ್ಟು ಶಾಸಕರು ಇಂದು ಸಂಜೆ ನಮ್ಮ ಜೊತೆಗೂಡಲಿದ್ದಾರೆ. ಇದಷ್ಟೇ ಅಲ್ಲದೆ, ಮೂರು ಸ್ವತಂತ್ರ ಶಾಸಕರೂ ನಮಗೆ ಬೆಂಬಲ ನೀಡಿದ್ದಾರೆ. ಎನ್'ಸಿಪಿ ಹಾಗೂ ಕಾಂಗ್ರೆಸ್ ಮಂತ್ರಿಗಳ ಹಗೆತನದ ವರ್ತನೆಯೇ ಶಾಸಕರು ಬಂಡಾಯವೇಳಲು ಕಾರಣವಾಗಿದೆ ಎಂದು ಹೇಳಿದ್ದಾರೆ.