ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದ ಆರೋಪಿಗೆ ಮರಣ ದಂಡನೆ
ಏಳೂವರೆ ವರ್ಷದ ಬುದ್ದಿಮಾಂದ್ಯ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ ವ್ಯಕ್ತಿಗೆ ಸುಪ್ರೀಂಕೋರ್ಟ್ ಶುಕ್ರವಾರ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಅಪರಾಧ ಬರ್ಬರ ಹಾಗೂ ಅಮಾನವೀಯವಾಗಿದೆ ಎಂದು ಹೇಳಿದೆ.
Published: 24th June 2022 03:46 PM | Last Updated: 24th June 2022 03:46 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಏಳೂವರೆ ವರ್ಷದ ಬುದ್ದಿಮಾಂದ್ಯ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ ವ್ಯಕ್ತಿಗೆ ಸುಪ್ರೀಂಕೋರ್ಟ್ ಶುಕ್ರವಾರ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಅಪರಾಧ ಬರ್ಬರ ಹಾಗೂ ಅಮಾನವೀಯವಾಗಿದೆ ಎಂದು ಹೇಳಿದೆ.
ರಾಜಸ್ಥಾನ ಹೈಕೋರ್ಟ್ ಆದೇಶ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎ. ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ. ಟಿ. ರವಿಕುಮಾರ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಆರೋಪಿ ಮನೋಜ್ ಪ್ರತಾಪ್ ಸಿಂಗ್ ಗೆ ಮರಣ ದಂಡನೆ ಶಿಕ್ಷೆ ನೀಡಿದೆ.
ಚಾಕಲೇಟ್ ನೀಡುವ ಮೂಲಕ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕದ್ದ ಮೋಟಾರ್ ಸೈಕಲ್ ನಲ್ಲಿ ಮುಗ್ದ ಸಂತ್ರಸ್ತೆಯನ್ನು ಅಪಹರಣ ಮಾಡಿ ಬರ್ಬರ ಹಾಗೂ ಅಮಾನವೀಯವಾಗಿ ಅತ್ಯಾಚಾರವೆಸಗಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.
ಏಳೂವರೆ ವರ್ಷದ ಬುದ್ದಿ ಮಾಂದ್ಯ ಬಾಲಕಿ ತಲೆಗೆ ಹೊಡೆದಿರುವುದರಿಂದ ಪ್ರಜ್ಞೆ ತಪ್ಪಿ, ತಲೆ ಬುರುಡೆ ಗಾಯವಾಗಿರುವ ಅಂಶವನ್ನು ಪರಿಗಣಿಸಿದ ನ್ಯಾಯಾಲಯ, ಇಂತಹ ಅಪರಾಧ ಅತ್ಯಂತ ಅಧ:ಪತನವಾಗಿದೆ ಎಂದಿದ್ದು, ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.