ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ: ಹೃದಯ ದಾನಿಯ ಕುಟುಂಬ ಭೇಟಿಯಾದ ವಿದ್ಯಾರ್ಥಿನಿ!

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಫಿನು ಶೆರಿನ್ ಎಂಬ ಕೇರಳದ ವಿದ್ಯಾರ್ಥಿನಿ ತನಗೆ ಹೃದಯ ಕಸಿಗೆ ನೆರವಾಗಿದ್ದ ಅಂಗಾಂಗ ದಾನಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. 
ವಿಷ್ಣು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಫಿನು ಶೆರಿನ್
ವಿಷ್ಣು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಫಿನು ಶೆರಿನ್

ಕೋಳಿಕ್ಕೋಡ್‌: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಫಿನು ಶೆರಿನ್ ಎಂಬ ಕೇರಳದ ವಿದ್ಯಾರ್ಥಿನಿ ತನಗೆ ಹೃದಯ ಕಸಿಗೆ ನೆರವಾಗಿದ್ದ ಅಂಗಾಂಗ ದಾನಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. 

ಕೋಳಿಕ್ಕೋಡ್‌ ನ ಮಯನಾಡ್ ನಲ್ಲಿರುವ ವಿಷ್ಣು ಎಂಬಾತ ಕಳೆದ 4 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಈತನ ಹೃದಯವನ್ನು ಫಿನು ಶೆರಿನ್ ಗೆ ಕಸಿ ಮಾಡಲಾಗಿತ್ತು. ಫಿನು ಶೆರಿನ್ 10 ನೇ ತರಗತಿ ಫಲಿತಾಂಶ ಬಂದಾಗಲೂ ಸಹ ಇದೇ ರೀತಿ ವಿಷ್ಣು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದರು. 

ಫಿನು ಶೆರಿನ್ 9 ನೇ ತರಗತಿಯಲ್ಲಿ ಓದುತ್ತಿದ್ದಾಗ ಒಂದು ದಿನ ಶಾಲೆಯಿಂದ ತೀವ್ರ ಅಸ್ವಸ್ಥರಾಗಿ ಮನೆಗೆ ತಲುಪಿದ್ದರು. ಆಸ್ಪತ್ರೆಯ ತಪಾಸಣೆ ಬಳಿಕ ಆಕೆಗೆ ತೀವ್ರವಾದ ಹೃದಯ ಸಮಸ್ಯೆ ಇರುವುದು ಬೆಳಕಿಗೆ ಬಂದಿತ್ತು. ಕೋಳಿಕ್ಕೋಡ್ ನ ವೈದ್ಯಕೀಯ ಆಸ್ಪತ್ರೆಯ ಹೃದಯರೋಗ ವಿಭಾಗದ ವೈದ್ಯರು ಪ್ರಾರಂಭದಲ್ಲಿ ಫಿನು ಗೆ ಪೇಸ್ ಮೇಕರ್ ಅಳವಡಿಸುವಂತೆ ಸಲಹೆ ನೀಡಲಾಗಿತ್ತು. ಆದರೆ ಆಕೆಯ ಹೃದಯ ಸರಿಪಡಿಸಲಾಗದಷ್ಟು ಅನಾರೋಗ್ಯಕ್ಕೀಡಾಗಿದ್ದನ್ನು ಗಮನಿಸಿದ ವೈದ್ಯರು ಪೇಸ್ ಮೇಕರ್ ಸಾಧ್ಯವಾಗುವುದಿಲ್ಲ ಹೃದಯ ಕಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದರು. 

4 ವರ್ಷಗಳ ಹಿಂದೆ ಫಿನುಗೆ ಬದುಕಿ ಉಳಿಯಲು ಅಗತ್ಯವಿದ್ದದ್ದು ವೈದ್ಯಕೀಯ ವೆಚ್ಚಗಳಿಗೆ 56 ಲಕ್ಷ ರೂಪಾಯಿ ಹಾಗೂ ಕಸಿ ಮಾಡಲು ಅಗತ್ಯವಿದ್ದ ಹೃದಯ! ಫಿನು ಇದ್ದ ಚಕ್ಕಲಕ್ಕಲ್ ನ ಪ್ರದೇಶದ ಜನರು ಸಾಮಾಜಿಕ ಕಾರ್ಯಕರ್ತ ಸಲೀಮ್ ಮದಾವೋರ್ ಜೊತೆಗೂಡಿ ಸಮಿತಿ ರಚಿಸಿ ಹಣವನ್ನೇನೊ ಹೊಂದಿಸಿದರು. ಫಿನು ಓದುತ್ತಿದ್ದ ಚಕ್ಕಲಕ್ಕಲ್ ನ ಹೆಚ್ಎಸ್ಎಸ್ ಒಂದೇ 13 ಲಕ್ಷ ರೂಪಾಯಿ ಧನ ಸಹಾಯ ಮಾಡಿತ್ತು.

ಫಿನು ತಂದೆ ಕೆಪಿ ಸಿದ್ಧಿಕಿ ಓರ್ವ ಆಟೋ ಚಾಲಕರಾಗಿದ್ದು, ತಮ್ಮ ಪರಿಸ್ಥಿತಿಯನ್ನು ನನ್ನ ಬಳಿ ಹೇಳಿಕೊಂಡಿದ್ದರು. ನಾವು ಸಾಧ್ಯವಾದಷ್ಟು ಸಹಾಯ ಮಾಡಲು ಮುಂದಾದೆವು ಹಣವನ್ನೇನೋ ಹೊಂದಿಸಬಹುದು ಆದರೆ ಮುಖ್ಯವಾದ ಸವಾಲು ಇದ್ದದ್ದು 14 ವರ್ಷದ ಬಾಲಕಿಗೆ ಸರಿ ಹೊಂದುವಂತಹ ಕಸಿಗೆ ಲಭ್ಯವಾಗಬೇಕಿದ್ದ ಮತ್ತೊಂದು ಹೃದಯದ್ದು! ದೀರ್ಘಕಾಲದ ನಿರೀಕ್ಷೆಯ ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಯ ಹಾಗೂ ಕೋಳಿಕ್ಕೋಡ್ ನ ಮೆಟ್ರೋಮೆಡ್ ಇಂಟರ್ನ್ಯಾಷನಲ್ ಕಾರ್ಡಿಯಾಕ್ ಸೆಂಟರ್ ನಲ್ಲಿ ಫಿನುಗೆ 23 ವರ್ಷದ ವಿಷ್ಣು ಎಂಬಾತನ ಹೃದಯ ಕಸಿಗೆ ಲಭ್ಯವಾಗಿತ್ತು. 

ಮೆಟ್ರೋಮೆಡ್ ಆಸ್ಪತ್ರೆಯಲ್ಲಿ ಫಿನುಗೆ ಯಶಸ್ವಿಯಾಗಿ ಹೃದಯ ಕಸಿಯಾಯಿತು. ಈ ಅವಧಿಯಲ್ಲಿ ಫಿನು ಅವರ ವಿದ್ಯಾಭ್ಯಾಸ 2 ವರ್ಷಗಳ ಹಿಂದೆ ಉಳಿಯಿತು. ಆದರೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫಿನು ರಸಾಯನಶಾಸ್ತ್ರವನ್ನು ಹೊರತುಪಡಿಸಿ ಎ+ ಗ್ರೇಡ್ ಪಡೆದಿದ್ದಾರೆ. 

"ನನ್ನ ಜೀವನದಲ್ಲಿ ಹೆಚ್ಚಿನ ಸಮಯವನ್ನು ಆಸ್ಪತ್ರಲ್ಲಿ ನೋಡಿದ್ದೇನೆ ಅಲ್ಲಿನ ವೈದ್ಯರು ಹಾಗೂ ನರ್ಸ್ ಗಳು ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ನಾನೂ ಸಹ ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಂಡು ಇತರರಿಗೆ ಸಹಾಯ ಮಾಡುತ್ತೇನೆ" ಎನ್ನುತ್ತಾರೆ ಫಿನು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com