ಗುವಾಹಟಿ ಹೋಟೆಲ್ ನಲ್ಲಿ ಚೆಸ್ ಆಡುತ್ತಿರುವ ಏಕನಾಥ್ ಶಿಂಧೆ.
ಗುವಾಹಟಿ ಹೋಟೆಲ್ ನಲ್ಲಿ ಚೆಸ್ ಆಡುತ್ತಿರುವ ಏಕನಾಥ್ ಶಿಂಧೆ.

ಮಹಾ ರಾಜಕೀಯ ಬಿಕ್ಕಟ್ಟು: ಗುಜರಾತ್‌ನಲ್ಲಿ ಅಮಿತ್ ಶಾ, ಫಡ್ನವಿಸ್ ಭೇಟಿ ಮಾಡಿದ ಬಂಡಾಯ ನಾಯಕ ಏಕನಾಥ್ ಶಿಂಧೆ

ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಬಂಡಾಯವನ್ನು ಶಿವಸೇನೆಯ ಆಂತರಿಕ ವಿಷಯ ಎಂದು ಬಣ್ಣಿಸುತ್ತಿದ್ದ ಬಿಜೆಪಿ ಈಗ ಭಿನ್ನಮತದ ಲಾಭ ಪಡೆಯಲು ಮುಂದಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ವಿರೋಧ ಪಕ್ಷದ...

ವಡೋದರಾ: ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಬಂಡಾಯವನ್ನು ಶಿವಸೇನೆಯ ಆಂತರಿಕ ವಿಷಯ ಎಂದು ಬಣ್ಣಿಸುತ್ತಿದ್ದ ಬಿಜೆಪಿ ಈಗ ಭಿನ್ನಮತದ ಲಾಭ ಪಡೆಯಲು ಮುಂದಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ವಡೋದರಾದಲ್ಲಿ ಶುಕ್ರವಾರ ತಡರಾತ್ರಿ ಶಿಂಧೆ ಅವರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಉನ್ನತ ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಫಡ್ನವೀಸ್ ಅವರು ಗುಜರಾತ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಎಲ್ಲಾ ಬಂಡುಕೋರರು ಬೀಡುಬಿಟ್ಟಿರುವ ಗುವಾಹಟಿಯ ಬ್ಲೂ ರಾಡಿಸನ್ ಹೋಟೆಲ್‌ನಿಂದ ಹೊರಟ ಶಿಂಧೆ, ತಮ್ಮ ಮುಂದಿನ ಕಾರ್ಯತಂತ್ರವನ್ನು ಚರ್ಚಿಸಲು ವಡೋದರಾದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಬಂಡಾಯ ಶಾಸಕರು ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಅನರ್ಹತೆ ಸಫಲವಾದರೆ ಅವರಿಗೆ ತೊಂದರೆಯಾಗಲಿದೆ. ಅಸೆಂಬ್ಲಿ ಡೆಪ್ಯೂಟಿ ಸ್ಪೀಕರ್ ಈಗಾಗಲೇ ಬಂಡಾಯ ಶಾಸಕರಿಗೆ ಅನರ್ಹತೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ಅಲ್ಲದೆ ಸೋಮವಾರದೊಳಗೆ ಉತ್ತರಿಸುವಂತೆಯೂ ಸೂಚಿಸಲಾಗಿದೆ.

ಈ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಶಿಂಧೆ ಬಿಜೆಪಿಯನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಬಂಡಾಯ ಶಾಸಕರು ಮಹಾರಾಷ್ಟ್ರದ ಹೊರಗಿದ್ದು ಐದು ದಿನಗಳು ಕಳೆದಿವೆ. ಅಭದ್ರತೆ ಮತ್ತು ಶಿವಸೇನಾ ಕಾರ್ಯಕರ್ತರು ತಮ್ಮ ಕ್ಷೇತ್ರಗಳಲ್ಲಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರಿಂದ ನಮ್ಮ ಚಡಪಡಿಕೆ ಹೆಚ್ಚುತ್ತಿದೆ. ಸರ್ಕಾರ ರಚನೆಯಲ್ಲಿ ಯಾವುದೇ ವಿಳಂಬವಾದರೆ, ನಂತರ ಪರಿಸ್ಥಿತಿ ನಮ್ಮ ಕೈಮೀರುವ ಸಾಧ್ಯತೆ ಇದೆ ಎಂದು ಶಿಂಧೆ ಅವರು ಅಮಿತ್ ಶಾ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com