ಕೊಲ್ಕತಾ: ಆಸ್ಪತ್ರೆಯ ಏಳನೇ ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ, ಗಂಭೀರ ಗಾಯ

ನಗರದ ಹೃದಯ ಭಾಗದಲ್ಲಿರುವ ಮುಲಿಕ್ ಬಜಾರ್ ನ ಖಾಸಗಿ ಆಸ್ಪತ್ರೆಯೊಂದರ ಬೆಡ್ ನಿಂದ ಪರಾರಿಯಾಗಿದ್ದ ಪುರುಷ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಳಿತಿದ್ದು ನಂತರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಕುಳಿತಿರುವ ರೋಗಿ
ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಕುಳಿತಿರುವ ರೋಗಿ

ಕೊಲ್ಕತಾ: ನಗರದ ಹೃದಯ ಭಾಗದಲ್ಲಿರುವ ಮುಲಿಕ್ ಬಜಾರ್ ನ ಖಾಸಗಿ ಆಸ್ಪತ್ರೆಯೊಂದರ ಬೆಡ್ ನಿಂದ ಪರಾರಿಯಾಗಿದ್ದ ಪುರುಷ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಳಿತಿದ್ದು ನಂತರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನರ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಿತ್ ಅಧಿಕಾರಿ ಎಂಬ ರೋಗಿ  ಕಿಟಕಿಯ ಕಿಂಡಿಗಳ ಮೂಲಕ ಕಟ್ಟಡದಿಂದ ಹೊರಗೆ ಬಂದಿದ್ದು, ಮೂಲೆಯೊಂದರಲ್ಲಿ ಭೀತಿಯಿಂದ ಕುಳಿತಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯವರು ಸ್ಥಳಕ್ಕೆ ಧಾವಿಸಿದ್ದು, ಆತನನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆ.

ಮಧ್ಯಾಹ್ನ 1-10 ರ ಸುಮಾರಿನಲ್ಲಿ ಆತ ಕೆಳಗೆ ಬಿದಿದ್ದಾನೆ. ಕೆಳಗೆ ಬೀಳುವಾಗ ಎರಡು ಬಾರಿ ಆತನ ತಲೆಯು ಗೋಡೆಗೆ ಬಡಿದಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಗಂಭೀರವಾಗಿ ಆತ ಗಾಯಗೊಂಡಿದ್ದು, ಆತನ ತಲೆ ಬುರುಡೆ, ಪಕ್ಕೆಲುಬು ಮತ್ತು ಎಡ ಗೈ ತೀವ್ರವಾಗಿ ಹಾನಿಯಾಗಿರುವುದಾಗಿ ಆಸ್ಪತ್ರೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಪತ್ತು ನಿರ್ವಹಣಾ ಅಧಿಕಾರಿಗಳು ಆತನನ್ನು ಕೆಳಗಿಳಿಸಲು ತುಂಬಾ ಪ್ರಯತ್ನಪಟ್ಟರು ಆದರೆ, ಆತನ ಕೈ ಜಾರಿ, ಕೆಳಗೆ ಬಿದಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆ ಬಳಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು, ಅಲ್ಲಿಂದ ಎಲ್ಲಿಯೂ ಹೋಗದಂತೆ ಆತನಿಗೆ ಹೇಳಿದ್ದಾರೆ. ಇದರಿಂದಾಗಿ ಎಜೆಸಿ ಬೋಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com