ಅಯೋಧ್ಯೆಯಲ್ಲಿ 18 ಜೀವಂತ ಗ್ರೆನೇಡ್‌ಗಳು ಪತ್ತೆ, ಎಲ್ಲವನ್ನೂ ನಿಷ್ಕ್ರಿಯಗೊಳಿಸಿದ ಸೇನೆ
ಅತ್ಯಂತ ಸೂಕ್ಷ್ಮ ಮತ್ತು ಸುರಕ್ಷಿತ ಅಯೋಧ್ಯೆಯ ಸೇನಾ ಕಂಟೋನ್ಮೆಂಟ್‌ನಲ್ಲಿ ಪ್ರಮುಖ ಭದ್ರತಾ ಲೋಪವಾಗಿದ್ದು, ಸೇನಾ ಅಧಿಕಾರಿಗಳ ಮೆಸ್ ಬಳಿಯ ನಿರ್ಮಲಿ ಕುಂಡ್ ಪ್ರದೇಶದಲ್ಲಿ ಶನಿವಾರ ರಾತ್ರಿ 18 ಜೀವಂತ ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿವೆ.
Published: 27th June 2022 11:46 PM | Last Updated: 28th June 2022 01:20 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಅತ್ಯಂತ ಸೂಕ್ಷ್ಮ ಮತ್ತು ಸುರಕ್ಷಿತ ಅಯೋಧ್ಯೆಯ ಸೇನಾ ಕಂಟೋನ್ಮೆಂಟ್‌ನಲ್ಲಿ ಪ್ರಮುಖ ಭದ್ರತಾ ಲೋಪವಾಗಿದ್ದು, ಸೇನಾ ಅಧಿಕಾರಿಗಳ ಮೆಸ್ ಬಳಿಯ ನಿರ್ಮಲಿ ಕುಂಡ್ ಪ್ರದೇಶದಲ್ಲಿ ಶನಿವಾರ ರಾತ್ರಿ 18 ಜೀವಂತ ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿವೆ.
ಘಾಘ್ರಾ ನದಿಯ ದಡದಲ್ಲಿರುವ ಈ ಪ್ರದೇಶವು ನದಿ ದಂಡೆಯ ಉದ್ದಕ್ಕೂ ಕೆಲವು ಜನ ವಾಸಿಸುತ್ತಾರೆ. ಪೊದೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮಾರಕಾಸ್ತ್ರಗಳನ್ನು ಗಮನಿಸಿದ ಸ್ಥಳೀಯರು, ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸೇನಾ ಗುಪ್ತಚರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎಲ್ಲಾ ಗ್ರೆನೇಡ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಇದನ್ನು ಓದಿ: ಅಯೋಧ್ಯೆ ನದಿಯಲ್ಲಿ ಪತ್ನಿ ಜೊತೆ ಅಸಭ್ಯ ವರ್ತನೆ; ಪತಿಗೆ ಸಾರ್ವಜನಿಕರಿಂದ 'ಧರ್ಮದೇಟು'!
ಕಂಟೋನ್ಮೆಂಟ್ ಮೂಲಕ ಹಾದುಹೋಗುವ ಜನರನ್ನು ತಪಾಸಣೆ ಮಾಡುವ ಮೂಲಕ ಸೇನೆಯು ಕಂಟೋನ್ಮೆಂಟ್‌ನ ಭದ್ರತೆಯನ್ನು ಹೆಚ್ಚಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ವಾಸ್ತವವಾಗಿ, ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾದ ಸ್ಥಳವು ಕಂಟೋನ್ಮೆಂಟ್ ಫೈರಿಂಗ್ ರೇಂಜ್ ನಿಂದ ಕೇವಲ 2.5 ಕಿಮೀ ದೂರದಲ್ಲಿದೆ.
ನಿರ್ಮಲಿ ಕುಂಡ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಯುವಕರು ಮೊದಲು ಗ್ರೆನೇಡ್‌ಗಳನ್ನು ಗುರುತಿಸಿ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು. "ಶಸ್ತ್ರಾಗಾರದಿಂದ ಹ್ಯಾಂಡ್ ಗ್ರೆನೇಡ್‌ಗಳನ್ನು ಹೇಗೆ ಹೊರತೆಗೆಯಲಾಯಿತು ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡಬೇಕು" ಎಂದು ಕಂಟೋನ್ಮೆಂಟ್ ಬೋರ್ಡ್ ಉಪಾಧ್ಯಕ್ಷ ರಾಮ್ ಮಿಲನ್ ನಿಶಾದ್ ಹೇಳಿದ್ದಾರೆ.