ಅಗ್ನಿಪಥ್ ಯೋಜನೆ: ಕೇವಲ ನಾಲ್ಕು ದಿನಗಳಲ್ಲಿ ವಾಯುಪಡೆಗೆ ಬಂದಿದ್ದು 94,000 ಅರ್ಜಿ!
ಕೇಂದ್ರದ 'ಅಗ್ನಿಪಥ್' ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಭಾರತೀಯ ವಾಯುಪಡೆಗೆ (ಐಎಎಫ್) 90,000 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
Published: 27th June 2022 07:50 PM | Last Updated: 27th June 2022 08:05 PM | A+A A-

ವಾಯುಪಡೆಯ ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರದ 'ಅಗ್ನಿಪಥ್' ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಭಾರತೀಯ ವಾಯುಪಡೆಗೆ (ಐಎಎಫ್) 90,000 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಜೂನ್ 14 ರಂದು ಯೋಜನೆಗೆ ಚಾಲನೆಗೆ ನೀಡಿದ ನಂತರ ದೇಶದ ಹಲವೆಡೆ ಹಿಂಸಾತ್ಮಾಕ ಪ್ರತಿಭಟನೆಗಳು ನಡೆದಿದ್ದು, ಯೋಜನೆ ವಾಪಸ್ ಪಡೆಯುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಈ ಮಧ್ಯೆ ಇಂದು ಬೆಳಗ್ಗೆ 10-30ರವರೆಗೂ ಒಟ್ಟಾರೇ 94, 281 ಅಗ್ನಿವೀರ್ ವಾಯು ಆಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಜುಲೈ 5 ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
अपने सपनों को साकार करें, #अग्निवीर बनें।
— PRO, Hyderabad, Ministry of Defence (@dprohyd) June 27, 2022
युवाओं में भर्ती के प्रति ज़बरदस्त रुचि।
आज सुबह 10:30 बजे तक अग्निवीर वायु बनने के लिए 94,281 आवेदकों ने पंजीकरण किया।
पंजीकरण की अंतिम तिथि- 5 जुलाई, 2022
और जानकारी के लिए क्लिक करें - https://t.co/fwVvpkoajR#Agnipath #AgniveerVayu pic.twitter.com/0wNMYJTkcr
ನೂತನ ಸೇನಾ ನೇಮಕಾತಿ ಯೋಜನೆಯಡಿ ಹದಿನೇಳೂವರೆ ವರ್ಷದಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಆದರೆ, ಅವರಲ್ಲಿ ಶೇ.25 ರಷ್ಟು ಮಂದಿಯನ್ನು ಮಾತ್ರ ಸೇನೆಯಲ್ಲಿ ಮುಂದುವರೆಸಲಾಗುತ್ತದೆ.
ಇದನ್ನೂ ಓದಿ: ವಿರೋಧದ ಸುಳಿಗೆ ಸಿಲುಕಿರುವ 'ಅಗ್ನಿಪಥ್' ಯೋಜನೆಗೆ ವಿಶ್ವಾಸದ ಕೊರತೆ!
ಜೂನ್ 16 ರಂದು ಸರ್ಕಾರ ಯೋಜನೆಯಡಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿತ್ತು. ತದನಂತರ ಕೇಂದ್ರ ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಅಗ್ನವೀರ್ ಗಳಿಗೆ ಆದ್ಯತೆಯಂತಹ ಕ್ರಮಗಳನ್ನು ಘೋಷಿಸಿತ್ತು.