ಮಹಾ ಬಿಕ್ಕಟ್ಟು: ಶಿವಸೇನಾ ಬಂಡಾಯ ನಾಯಕ ಶಿಂಧೆ ಹಿಂದೆ ಪ್ರಬಲ ಶಕ್ತಿಗಳು ಕೆಲಸ ಮಾಡುತ್ತಿವೆ - ಎನ್‌ಸಿಪಿ ನಾಯಕ ಖಡ್ಸೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಹಿಂದೆ ಕೆಲವು "ಪ್ರಬಲ ಶಕ್ತಿ"ಗಳು ಕೆಲಸ ಮಾಡುತ್ತಿವೆ ಎಂದು ಹೊಸದಾಗಿ ಆಯ್ಕೆಯಾದ ಎನ್‌ಸಿಪಿ ಎಂಎಲ್‌ಸಿ ಏಕನಾಥ್ ಖಡ್ಸೆ ಅವರು...
Published: 27th June 2022 01:25 AM | Last Updated: 27th June 2022 01:25 AM | A+A A-

ಏಕನಾಥ್ ಖಡ್ಸೆ
ಥಾಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಹಿಂದೆ ಕೆಲವು "ಪ್ರಬಲ ಶಕ್ತಿ"ಗಳು ಕೆಲಸ ಮಾಡುತ್ತಿವೆ ಎಂದು ಹೊಸದಾಗಿ ಆಯ್ಕೆಯಾದ ಎನ್‌ಸಿಪಿ ಎಂಎಲ್‌ಸಿ ಏಕನಾಥ್ ಖಡ್ಸೆ ಅವರು ಭಾನುವಾರ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಮಾಜಿ ನಾಯಕ ಖಡ್ಸೆ, ಮುಂದಿನ ದಿನಗಳಲ್ಲಿ ಶಿಂಧೆ ಹಿಂದೆ ಇರುವ "ಪ್ರಬಲ ಶಕ್ತಿ"ಗಳು ಯಾರು ಅಂತ ಬಹಿರಂಗಗೊಳ್ಳಲಿದೆ ಎಂದರು.
ಇದನ್ನು ಓದಿ: ಮಹಾ ರಾಜಕೀಯ ಬಿಕ್ಕಟ್ಟು; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಂಡಾಯ ನಾಯಕ ಏಕನಾಥ್ ಶಿಂಧೆ
ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯ ಇಂತಹ ಅಸ್ಥಿರ ಪರಿಸ್ಥಿತಿಗೆ ಹೋಗಿರುವುದನ್ನು ನಾನು ನೋಡಿಲ್ಲ. ಪ್ರಬಲ ಶಕ್ತಿಗಳ ಬೆಂಬಲವಿಲ್ಲದೆ ಶಿಂಧೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
"ಇದು(ಬಂಡಾಯ) ಶಿವಸೇನೆಯ ಆಂತರಿಕ ಸಮಸ್ಯೆಯಾಗಿದೆ. ಆದರೆ, ಖಂಡಿತವಾಗಿಯೂ ಶಿಂಧೆ ಹಿಂದೆ ಪ್ರಬಲ ಶಕ್ತಿ ಕೆಲಸ ಮಾಡುತ್ತಿದೆ. ಅವರು ಪ್ರಬಲ ಶಕ್ತಿಗಳ ಬೆಂಬಲವಿಲ್ಲದೆ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ 40 ವರ್ಷಗಳಲ್ಲಿ ರಾಜಕೀಯ ಜೀವನದಲ್ಲಿ ರಾಜ್ಯದಲ್ಲಿ ಇಂತಹ ಅಸ್ಥಿರತೆಯನ್ನು ನಾನು ನೋಡಿಲ್ಲ" ಖಡ್ಸೆ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.