ಬಾಳ ಸಾಹೇಬ್, ಆನಂದ್ ದಿಘೆಗೆ ಸಂದ ಜಯ: ಸುಪ್ರೀಂ ಕೋರ್ಟ್ ಆದೇಶ ಕುರಿತು ಏಕನಾಥ್ ಶಿಂಧೆ ಪ್ರತಿಕ್ರಿಯೆ
ಅನರ್ಹತೆ ನೋಟಿಸ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಬಾಳ ಠಾಕ್ರೆ ಮತ್ತು ಆನಂದ್ ದಿಘೆ ಅವರಿಗೆ ಸಂದ ಜಯವಾಗಿದೆ ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ.
Published: 27th June 2022 06:46 PM | Last Updated: 27th June 2022 06:56 PM | A+A A-

ಏಕನಾಥ್ ಶಿಂಧೆ
ಮುಂಬೈ: ಅನರ್ಹತೆ ನೋಟಿಸ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಬಾಳ ಠಾಕ್ರೆ ಮತ್ತು ಆನಂದ್ ದಿಘೆ ಅವರಿಗೆ ಸಂದ ಜಯವಾಗಿದೆ ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ಇದು ಹಿಂದುತ್ವ ಸಾಮ್ರಾಟ ಬಾಳಸಾಹೇಬ್ ಠಾಕ್ರೆ ಅವರ ಹಿಂದೂತ್ವ ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಚಿಂತನೆಗೆ ಸಂದ ಗೆಲುವು ಎಂದಿದ್ದಾರೆ.
ಇದನ್ನೂ ಓದಿ: ಮಹಾ' ರಾಜಕೀಯ: ಸದ್ಯಕ್ಕೆ ಅನರ್ಹತೆ ಭೀತಿಯಿಂದ ಶಿಂಧೆ ಬಣ ಬಚಾವ್; ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಅನರ್ಹತೆ ನೋಟಿಸ್‌ಗೆ ಉತ್ತರಿಸಲು 16 ಅತೃಪ್ತ ಶಾಸಕರಿಗೆ ಉಪಸಭಾಪತಿ ನೀಡಿದ ಸಮಯವನ್ನು ಜುಲೈ 11 ರವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ.
हा वंदनीय हिंदुहृदयसम्राट शिवसेनाप्रमुख बाळासाहेब ठाकरे यांच्या हिंदुत्वाचा आणि धर्मवीर आनंद दिघे साहेबांच्या विचारांचा विजय..!#realshivsenawins
— Eknath Shinde - एकनाथ शिंदे (@mieknathshinde) June 27, 2022
ಆದಾಗ್ಯೂ, ವಿಧಾನಸಭೆಯಲ್ಲಿ ಯಾವುದೇ ವಿಶ್ವಾಸಮತ ಯಾಚನೆ ನಡೆಸಬಾರದು ಎಂಬ ಮಹಾರಾಷ್ಟ್ರ ಸರ್ಕಾರದ ಅರ್ಜಿ ಕುರಿತು ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು. ಕಾನೂನುಬಾಹಿರ ಸಂದರ್ಭದಲ್ಲಿ ಯಾವಾಗ ಬೇಕಾದರೂ ಇದನ್ನು ಅವರು ಕೈಗೊಳ್ಳಬಹುದು ಎಂದು ಹೇಳಿತು.
ಇದನ್ನೂ ಓದಿ: ಮಹಾರಾಷ್ಟ್ರ ಬಿಕ್ಕಟ್ಟು: ದ್ರೋಹಿಗಳು ಗೆಲ್ಲುವುದಿಲ್ಲ; ಶಿಂಧೆ ಬಣಕ್ಕೆ ಆದಿತ್ಯ ಠಾಕ್ರೆ ಟಾಂಗ್