ಕೋಲ್ಕತಾ: ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದೆ ನೆಲದ ಮೇಲೆ ಮಲಗಿದ ಸಿಪಿಐ-ಎಂ ಮಾಜಿ ಶಾಸಕ ದಿಬಕರ್ ಹನ್ಸ್ದಾ

ಸಿಪಿಐ-ಎಂ ಮಾಜಿ ಶಾಸಕ ದಿಬಾಕರ್ ಹನ್ಸ್ದಾ ಅವರನ್ನು ರಾಜ್ಯದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ದೊರೆಯದ ಕಾರಣ ನೆಲದ ಮೇಲೆಯೇ ಮಲಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ನೆಲದ ಮೇಲೆ ಕುಳಿತಿರುವ ಮಾಜಿ ಶಾಸಕ
ನೆಲದ ಮೇಲೆ ಕುಳಿತಿರುವ ಮಾಜಿ ಶಾಸಕ

ಕೊಲ್ಕೋತಾ: ಸಿಪಿಐ-ಎಂ ಮಾಜಿ ಶಾಸಕ ದಿಬಾಕರ್ ಹನ್ಸ್ದಾ ಅವರನ್ನು ರಾಜ್ಯದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ದೊರೆಯದ ಕಾರಣ ನೆಲದ ಮೇಲೆಯೇ ಮಲಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾದ  ಹನ್ಸ್ದಾ ಅವರಿಗೆ ಹಾಸಿಗೆ ಹಾಸಿಗೆ ನೀಡಲಿಲ್ಲ, ಹೀಗಾಗಿ ಪ್ಲಾಸ್ಟಿಕ್ ಶೀಟ್ ಖರೀದಿಸಿ ನೆಲದ ಮೇಲೆ ಹಾಸಿಕೊಂಡು ಮಲಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಹನ್ಸ್ಸ್ದಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ. ಬೆಡ್ ನೀಡುವ ಮೊದಲು 28 ಗಂಟೆ ತಾವು ಅನುಭವಿಸಿದ ಯಾತನೆ ಬಗ್ಗೆ ವಿವರಿಸಿದ್ದಾರೆ. ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಹಾನ್ಸ್ಡಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

2011 ರ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ ಸಿಪಿಐ-ಎಂ ಶಾಸಕರಲ್ಲಿ ಹನ್ಸ್ದಾ ಒಬ್ಬರು. 2011 ಮತ್ತು 2016 ರ ನಡುವೆ ಹಿಂದುಳಿದ ಪ್ರದೇಶದಲ್ಲಿ ಚುನಾಯಿತ ಪ್ರತಿನಿಧಿಯಾಗಿ ಹನ್ಸ್ಡಾ ಸೇವೆ ಸಲ್ಲಿಸಿದರು.

ಮಾಜಿ ಶಾಸಕ ಹನ್ಸ್ದಾ ಭಾನುವಾರ ತಮ್ಮ ಸಂಬಂಧಿಕರೊಂದಿಗೆ ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಗೆ ದಾಖಲಾಗುವ ಮೊದಲು ಹಾಸಿಗೆ ಲಭ್ಯವಿಲ್ಲ ಎಂದು ನಮಗೆ ತಿಳಿಸಲಾಯಿತು. ನಂತರ ತಾವು ನೆಲದ ಮೇಲೆ ಮಲಗಲು ಒಪ್ಪಿದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು, ಸ್ಥಳೀಯ ಅಂಗಡಿಯಲ್ಲಿ ಪ್ಲಾಸ್ಟಿಕ್ ಹಾಳೆಯನ್ನು ಖರೀದಿಸಿ ತಂದು ನೆಲೆದ ಮೇಲೆ ಹಾಕಿದೆ,

ಮತ್ತೊಬ್ಬ ಸಂಬಂಧಿ ತನ್ನ ಮೊಬೈಲ್‌ನಲ್ಲಿ ಈ ಅವಸ್ಥೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. "ಇದು ವೈರಲ್ ಆದ ನಂತರ, ಅನೇಕರು ಆಸ್ಪತ್ರೆಯ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದಾರೆ, ಅಂತಿಮವಾಗಿ ಈ ವಿಷಯ ಉನ್ನತ ಆರೋಗ್ಯಾಧಿಕಾರಿಗಳಿಗೆ ತಲುಪಿ ವ್ಯವಸ್ಥೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com