ಆಪರೇಷನ್ ಗಂಗಾ: ಉಕ್ರೇನ್ ನಿಂದ ಇಂದು 182 ಭಾರತೀಯರು ಸ್ವದೇಶಕ್ಕೆ
ಆಪರೇಷನ್ ಗಂಗಾ ಭಾಗವಾಗಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಗಳ ಪೈಕಿ 7 ನೇ ವಿಮಾನ ಸುರಕ್ಷಿತವಾಗಿ ಭಾರತ ತಲುಪಿದ್ದು, 182 ಭಾರತೀಯರು ತಾಯ್ನಾಡಿಗೆ ಇಂದು (ಮಾ.1) ರಂದು ಮರಳಿ ಬಂದಿದ್ದಾರೆ.
Published: 01st March 2022 05:43 PM | Last Updated: 01st March 2022 05:43 PM | A+A A-

ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಕೇಂದ್ರ ಸಚಿವ ನಾರಾಯಣ್ ರಾಣೆ
ನವದೆಹಲಿ: ಆಪರೇಷನ್ ಗಂಗಾ ಭಾಗವಾಗಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಗಳ ಪೈಕಿ 7 ನೇ ವಿಮಾನ ಸುರಕ್ಷಿತವಾಗಿ ಭಾರತ ತಲುಪಿದ್ದು, 182 ಭಾರತೀಯರು ತಾಯ್ನಾಡಿಗೆ ಇಂದು (ಮಾ.1) ರಂದು ಮರಳಿ ಬಂದಿದ್ದಾರೆ.
ಇದನ್ನೂ ಓದಿ: ಉಕ್ರೇನ್ನ ಖಾರ್ಕಿವ್ನಲ್ಲಿ ರಷ್ಯಾ ಶೆಲ್ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವು
"ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಶೇಷ ವಿಮಾನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದು, ಎಂಎಸ್ಎಂಇ ಇಲಾಖೆಯ ಕೇಂದ್ರ ಸಚಿವ ನಾರಾಯಣ್ ರಾಣೆ ಭಾರತೀಯರನ್ನು ಸ್ವಾಗತಿಸಿದರು ಈ ಪೈಕಿ ಬಹುತೇಕ ಮಂದಿ ವಿದ್ಯಾರ್ಥಿಗಳಿದ್ದರು" ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಉಕ್ರೇನ್ ನಿಂದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಭಾರತ ಸರ್ಕಾರ ಬದ್ಧವಾಗಿದೆ. "ನಿಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳನ್ನೂ ಸುರಕ್ಷಿತವಾಗಿ ಕರೆತರುತ್ತೇವೆ ಎಂದು ಸಚಿವರು ಭಾರತಕ್ಕೆ ಮರಳಿದವರಿಗೆ ಭರವಸೆ ನೀಡಿದ್ದಾರೆ.
"ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವರು, ಯುದ್ಧಗ್ರಸ್ತ ದೇಶದಿಂದ ಬಂದ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ ಅವರು ತಮ್ಮ ಮನೆಗಳಿಗೆ ತೆರಳಲು ಎಲ್ಲಾ ರೀತಿಯ ನೆರವನ್ನೂ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.