ಉಕ್ರೇನ್ ಸ್ಥಳಾಂತರ ಕಾರ್ಯಾಚರಣೆ: ಸಾಕುಪ್ರಾಣಿಗಳನ್ನು ಅಲ್ಲೇ ಬಿಡಲೊಪ್ಪದ ಮಲಯಾಳಿ ವಿದ್ಯಾರ್ಥಿಗಳು
ಅಪಾಯಕರ ಸನ್ನಿವೇಶದಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುವ ಮನುಷ್ಯಪ್ರಾಣಿಗಳು ನಮ್ಮ ನಡುವೆ ಹೆಚ್ಚಿರುವಾಗ ಇವರು ಇನ್ನೊಂದು ಮೂಕಜೀವದ ಕುರಿತು ಚಿಂತಿಸುತ್ತಿರುವುದು ಮನಕಲಕುವ ಸಂಗತಿ.
Published: 02nd March 2022 12:16 PM | Last Updated: 02nd March 2022 12:16 PM | A+A A-

ಮೆಚ್ಚಿನ ನಾಯಿ ಜೊತೆ ಆರ್ಯಾ
ಕೀವ್: ಉಕ್ರೇನಿನಲ್ಲಿ ಮೆಡಿಕಲ್ ವ್ಯಾಸಂಗ್ ಮಾಡುತ್ತಿರುವ ಕೇರಳದ ಆರ್ಯಾಗೆ ನಾಯಿ ಎಂದರೆ ತುಂಬಾ ಪ್ರೀತಿ. ಹೀಗಾಗಿ ಒಂದು ನಾಯಿಯನ್ನು ಸಾಕಿದ್ದಳು. ಅವಳೆಲ್ಲಾ ಚಟುವಟಿಕೆಗಳಲ್ಲೂ ನಾಯಿ ಭಾಗಿ.
ಇದನ್ನೂ ಓದಿ: ಉಕ್ರೇನ್ ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ: ಕೂಡಲೇ ಆ ಕಟ್ಟಡಗಳ ತೊರೆಯುವಂತೆ ಜನತೆಗೆ ಅಧಿಕಾರಿಗಳ ಸೂಚನೆ
ಇದೀಗ ಯುದ್ಧಪೀಡಿತ ಉಕ್ರೇನಿನಿಂದ ಅನಿವಾರ್ಯವಾಗಿ ಸ್ಥಳಾಂತರಗೊಂಡು ಭಾರತಕ್ಕೆ ವಾಪಸ್ಸಾಗಲು ಆರ್ಯ ಹವಣಿಸುತ್ತಿದ್ದಾಳೆ. ಅವಳಿಗೀಗ ಸಂಧಿಗ್ಧತೆ ಎದುರಾಗಿದೆ.
ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡುತ್ತಿರುವ ಸೈನಿಕನಿಗೆ ಉಕ್ರೇನ್ ಕೊಡ್ತಿರೋ ಸಂಬಳ ಇಷ್ಟು
ತಾನು ಜೀವಕ್ಕೂ ಹೆಚ್ಚು ಪ್ರೀತಿಸುವ ನಾಯಿಯನ್ನು ಅಲ್ಲಿಯೇ ಬಿಟ್ಟು ಬರಲು ಆಕೆಯ ಮನಸ್ಸು ಒಪ್ಪುತ್ತಿಲ್ಲ. ಇದು ಅವಳೊಬ್ಬಳದೇ ಕಥೆಯಲ್ಲ. ಅವಳಂತೆಯೇ ಕೇರಳ ಮೂಲದ ರಿದಿನ್ ರಾಜ್, ಬಾಬ್ ಸನ್ ಸೇರಿದಂತೆ ಹಲವು ಮಂದಿ ಸಿಗುತ್ತಾರೆ.
ಇದನ್ನೂ ಓದಿ: ಉಕ್ರೇನ್ನ ಖಾರ್ಕಿವ್ನಲ್ಲಿ ರಷ್ಯಾ ಶೆಲ್ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವು
ಅನೇಕ ಮಂದಿ ಸಾಕು ಪ್ರಾಣಿ ಸಹಿತ ಭಾರತಕ್ಕೆ ವಾಪಸ್ಸಾಗುವ ಮಾರ್ಗದ ಹುಡುಕಾಟದಲ್ಲಿದ್ದಾರೆ. ಅಪಾಯಕರ ಸನ್ನಿವೇಶದಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುವ ಮನುಷ್ಯಪ್ರಾಣಿಗಳು ನಮ್ಮ ನಡುವೆ ಹೆಚ್ಚಿರುವಾಗ ಇವರು ಇನ್ನೊಂದು ಮೂಕಜೀವದ ಕುರಿತು ಚಿಂತಿಸುತ್ತಿರುವುದು ಮನಕಲಕುವ ಸಂಗತಿ.
ಇದನ್ನೂ ಓದಿ: ಲಿಪ್ ಸ್ಟಿಕ್ ಹಿಡಿಯುತ್ತಿದ್ದ ಕೈಗಳಲ್ಲಿ ಈಗ ಅಟೊಮ್ಯಾಟಿಕ್ ರೈಫಲ್: ಸೇನೆ ಜೊತೆ ಕೈಜೋಡಿಸಿದ ಮಾಜಿ ಮಿಸ್ ಉಕ್ರೇನ್