ಯೋಗಿ ಆದಿತ್ಯನಾಥ್ ಅವರನ್ನು ಮತ್ತೆ ಮಠಕ್ಕೆ ಕಳುಹಿಸುವ ಸಮಯವಿದು: ಬಿಎಸ್ ಪಿ ನಾಯಕಿ ಮಾಯಾವತಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು "ಮತ್ತೆ ಅವರ ಮಠಕ್ಕೆ" ಕಳುಹಿಸುವ ಸಮಯ ಬಂದಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಗುರುವಾರ ಹೇಳಿದ್ದಾರೆ.
Published: 04th March 2022 12:30 PM | Last Updated: 04th March 2022 02:00 PM | A+A A-

ಮಾಯಾವತಿ
ವಾರಣಾಸಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು "ಮತ್ತೆ ಅವರ ಮಠಕ್ಕೆ" ಕಳುಹಿಸುವ ಸಮಯ ಬಂದಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಗುರುವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಕುಚಿತ ಮತ್ತು ಜಾತಿವಾದಿ ಮನಸ್ಥಿತಿಯಿಂದ ಆಡಳಿತ ಮಾಡಿದ್ದಾರೆ, ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರನ್ನು ಪ್ರತಿ ಹಂತದಲ್ಲೂ ಕಡೆಗಣಿಸಿದ್ದಾರೆ ಎಂದು ಆರೋಪಿಸಿರುವ ಮಾಯಾವತಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಬಿಎಸ್ ಪಿ ಚುನವಣಾ ಸಭೆಯಲ್ಲಿ ಮಾತನಾಡಿದ ಅವರು, ಎಕ್ಸಿಟ್ ಪೋಲ್ಸ್ ಸಮೀಕ್ಷೆಯಲ್ಲಿ ಬಿಜೆಪಿ ಪರ ವರದಿ ನೀಡಿರುವುದಕ್ಕೆ ಮಾಧ್ಯಮಗಳ ವಿರುದ್ಧ ಮಾಯಾವತಿ ಕಿಡಿ ಕಾರಿದರು. ಈ ಜನಾಭಿಪ್ರಾಯ ಮತ್ತು ಅದರ ಉತ್ಸಾಹವನ್ನು ನೋಡಿದರೆ, ನೀವು ಬಿಎಸ್ಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ನಿಮ್ಮ 'ಬೆಹೆನ್ಜಿ'ಯನ್ನು ಐದನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲು ಹಾಗೂ ಯೋಗಿಯನ್ನು ವಾಪಸ್ ಅವರ ಮಠಕ್ಕೆ, ಕಳುಹಿಸಲು ನೀವು ಸಿದ್ಧರಾಗಿರುವಿರಿ ಎಂದು ನಾನು ಹೇಳಬಲ್ಲೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿ ಇಲ್ಲ; ನಾವು ಯಾವುದೇ ಪಕ್ಷದ ಬಿ ಟೀಂ ಅಲ್ಲ: ಮಾಯಾವತಿ ಗುಡುಗು
ಈ ಸರ್ಕಾರವು ಮುಸ್ಲಿಮರ ಅಭಿವೃದ್ಧಿ ಮತ್ತು ಭದ್ರತೆಯ ಬಗ್ಗೆ ಯಾವುದೇ ಗಮನವನ್ನು ನೀಡಿಲ್ಲ, ಅವರನ್ನು ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಜೀವನ ಹಾಳು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.