"ಪ್ರಧಾನಿ ಮೋದಿಗೆ ಉಕ್ರೇನ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಿಂತ ಪುಣೆಯಲ್ಲಿ ಪೂರ್ಣಗೊಳ್ಳದ ಮೆಟ್ರೋ ಉದ್ಘಾಟನೆ ಮುಖ್ಯವೇ?"
ಪ್ರಧಾನಿ ನರೇಂದ್ರ ಮೋದಿ ಪುಣೆಯಲ್ಲಿ ಮೆಟ್ರೋ ವನ್ನು ಉದ್ಘಾಟನೆ ಮಾಡುವ ಕಾರ್ಯಕ್ರಮ ನಿಗದಿಯಾಗಿದ್ದು ಈ ಬಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ಮೋದಿ ನಡೆಯನ್ನು ಟೀಕಿಸಿದ್ದಾರೆ.
Published: 05th March 2022 03:50 PM | Last Updated: 05th March 2022 04:44 PM | A+A A-

ಶರದ್ ಪವಾರ್
ಪುಣೆ: ಪ್ರಧಾನಿ ನರೇಂದ್ರ ಮೋದಿ ಪುಣೆಯಲ್ಲಿ ಮೆಟ್ರೋ ವನ್ನು ಉದ್ಘಾಟನೆ ಮಾಡುವ ಕಾರ್ಯಕ್ರಮ ನಿಗದಿಯಾಗಿದ್ದು ಈ ಬಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ಮೋದಿ ನಡೆಯನ್ನು ಟೀಕಿಸಿದ್ದಾರೆ.
ಪ್ರಧಾನಿ ಉದ್ಘಾಟಿಸುತ್ತಿರುವ ಮೆಟ್ರೋ ಸೇವೆಯ ಕಾಮಗಾರಿ ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಿರುವ ಶರದ್ ಪವಾರ್, ಮೆಟ್ರೋ ಉದ್ಘಾಟನೆಗಿಂತಲೂ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಭಾನುವಾರ ಪುಣೆಯಲ್ಲಿ ಮೆಟ್ರೋ ಸೇವೆ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಪುಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಯೋಜನೆಗಳು ಅಪೂರ್ಣ ಸ್ಥಿತಿಯಲ್ಲಿವೆ. ಆ ಪ್ರಮುಖ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದಕ್ಕಿಂತಲೂ ಉಕ್ರೇನ್ ನಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ರಕ್ಷಿಸುವುದು ಅತ್ಯಂತ ಮುಖ್ಯವಾದ ಕೆಲಸ. ಈ ಬಗ್ಗೆ ಆಡಳಿತ ಪಕ್ಷ ಗಂಭೀರವಾಗಿ ಚಿಂತಿಸುತ್ತಿದೆ ಎಂದುಕೊಂಡಿದ್ದೇನೆ ಎಂದು ಪವಾರ್ ಹೇಳಿದ್ದಾರೆ.
ಆಪರೇಷನ್ ಗಂಗಾ ಬಗ್ಗೆ ಶರದ್ ಪವಾರ್ ಇತ್ತೀಚೆಗೆ ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿದ್ದರು.