ಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ವಿಶೇಷ ಸಿಬಿಐ ಕೋರ್ಟ್
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE)ದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ರಾಮಕೃಷ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ಸಿಬಿಐ ಕೋರ್ಟ್ ಶನಿವಾರ ವಜಾಗೊಳಿಸಿದೆ.
Published: 05th March 2022 01:23 PM | Last Updated: 05th March 2022 01:30 PM | A+A A-

ಚಿತ್ರಾ ರಾಮಕೃಷ್ಣ
ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE)ದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ರಾಮಕೃಷ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ಸಿಬಿಐ ಕೋರ್ಟ್ ಶನಿವಾರ ವಜಾಗೊಳಿಸಿದೆ.
ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಿಂದ ಡಿಸೆಂಬರ್ 2016 ರವರೆಗೆ ಎನ್‌ಎಸ್‌ಇಯ(NSA) ಎಂಡಿ ಮತ್ತು ಸಿಇಒ ಆಗಿದ್ದರು, ನರೇನ್ ಅವರು ಏಪ್ರಿಲ್ 1994 ರಿಂದ ಮಾರ್ಚ್ 2013 ರವರೆಗೆ ಎಕ್ಸ್‌ಚೇಂಜ್‌ನ ಎಂಡಿ ಮತ್ತು ಸಿಇಒ ಆಗಿದ್ದರು. ನಂತರ ಅವರನ್ನು ಎನ್‌ಎಸ್‌ಇ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ವರ್ಗದಲ್ಲಿ ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಏಪ್ರಿಲ್ 2013 ಮತ್ತು ಜೂನ್ 2017 ರವರೆಗೆ ಹಾಗೆಯೇ ಉಳಿದಿತ್ತು.
ಇದನ್ನೂ ಓದಿ: 2021ರಲ್ಲಿ ಆನಂದ್ ಸುಬ್ರಹ್ಮಣ್ಯನ್ ಪತ್ನಿಗೆ ಚೆನ್ನೈ ಬಂಗಲೆ ಮಾರಿದ್ದ ಚಿತ್ರಾ ರಾಮಕೃಷ್ಣ!
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಚಿತ್ರಾ ರಾಮಕೃಷ್ಣ ಮತ್ತು ಇತರರ ಮೇಲೆ ಸುಬ್ರಮಣಿಯನ್ ಅವರನ್ನು ಮುಖ್ಯ ಕಾರ್ಯತಂತ್ರದ ಸಲಹೆಗಾರರನ್ನಾಗಿ ನೇಮಿಸುವಲ್ಲಿ ಮತ್ತು ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿಗೆ ಸಲಹೆಗಾರರಾಗಿ ಮರು ನೇಮಕ ಮಾಡುವಲ್ಲಿ ಆಡಳಿತ ಲೋಪದೋಷಗಳಾಗಿವೆ ಎಂಬ ಗಂಭೀರ ಆರೋಪವಿದ್ದು ಈ ಸಂಬಂಧ ಕೇಸು ದಾಖಲಾಗಿದೆ.
ಸೆಬಿ ಚಿತ್ರಾ ರಾಮಕೃಷ್ಣ ಮೇಲೆ 3 ಕೋಟಿ ರೂಪಾಯಿ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ), ಸುಬ್ರಮಣಿಯನ್, ಮಾಜಿ ಎನ್‌ಎಸ್‌ಇ ಎಂಡಿ ಮತ್ತು ಸಿಇಒ ರವಿ ನಾರಾಯಣ್‌ಗೆ ತಲಾ ₹2 ಕೋಟಿ ಮತ್ತು ಮುಖ್ಯ ನಿಯಂತ್ರಕ ಮತ್ತು ಅನುಸರಣೆ ಅಧಿಕಾರಿಯಾಗಿದ್ದ ವಿಆರ್ ನರಸಿಂಹನ್‌ಗೆ ₹6 ಲಕ್ಷ ರೂಪಾಯಿ ದಂಡ ವಿಧಿಸಿದೆ.