ಎನ್ ಎಸ್ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣರನ್ನು ಸ್ಥಳೀಯ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಿರುವ ಸಿಬಿಐ
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ(NSE) ಮಾಜಿ ಕಾರ್ಯಕಾರಿ ಮುಖ್ಯಸ್ಥ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಸ್ಥಳೀಯ ವಿಶೇಷ ಸಿಬಿಐ ಕೋರ್ಟ್ ಮುಂದೆ ಇಂದು ಸೋಮವಾರ ಹಾಜರುಪಡಿಸಲಿದೆ.
Published: 07th March 2022 10:24 AM | Last Updated: 07th March 2022 10:24 AM | A+A A-

ಚಿತ್ರಾ ರಾಮಕೃಷ್ಣ
ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ(NSE) ಮಾಜಿ ಕಾರ್ಯಕಾರಿ ಮುಖ್ಯಸ್ಥ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಸ್ಥಳೀಯ ವಿಶೇಷ ಸಿಬಿಐ ಕೋರ್ಟ್ ಮುಂದೆ ಇಂದು ಸೋಮವಾರ ಹಾಜರುಪಡಿಸಲಿದೆ.
ಎನ್ಎಸ್ಇಯ ಬಹುಕೋಟಿ ಮಾರುಕಟ್ಟೆ ವಂಚನೆ ಮತ್ತು ಅಕ್ರಮಗಳ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಸಂಬಂಧಪಟ್ಟ ನ್ಯಾಯಾಲಯದ ಅನುಮತಿಯೊಂದಿಗೆ ಚಿತ್ರಾ ರಾಮಕೃಷ್ಣ ಅವರ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗುವುದು ಎಂದು ಸಿಬಿಐ ವಿಶೇಷ ಕೋರ್ಟ್ ಹೇಳಿತ್ತು. ಇದಕ್ಕೂ ಮೊದಲು, ನ್ಯಾಯಾಲಯವು ನಿರೀಕ್ಷಣಾ ಜಾಮೀನಿನ ಮನವಿಯನ್ನು ತಿರಸ್ಕರಿಸಿತ್ತು.
ಆಕೆಯ ಬಂಧನಕ್ಕೂ ಮುನ್ನ, ಎನ್ಎಸ್ಇ ಕೊಲೊಕೇಶನ್ ಕೇಸಿನಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಆನಂದ್ ಸುಬ್ರಮಣಿಯನ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಮೀಪದ ಬಂಧುಗಳನ್ನು ಬಂಧಿಸಲಾಗಿತ್ತು.
ಆನಂದ್ ಸುಬ್ರಮಣಿಯನ್ ಅವರ ಕಸ್ಟಡಿ ದಿನಗಳು ನಿನ್ನೆ ಕೊನೆಗೊಂಡಿದ್ದರಿಂದ ಚಿತ್ರಾ ರಾಮಕೃಷ್ಣ ಅವರನ್ನು ಸೋಮವಾರ ಹಾಜರುಪಡಿಸುವ ಜೊತೆಗೆ ಆನಂದ್ ಸುಬ್ರಮಣಿಯನ್ ಅವರನ್ನು ಎರಡನೇ ರಿಮಾಂಡ್ ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗುತ್ತದೆ.