ಪಂಜಾಬ್: ಶಂಕಿತ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ ಎಫ್
ಪಂಜಾಬ್ನ ಫಿರೋಜ್ಪುರ ಸೆಕ್ಟರ್ನ ಅಂತರಾಷ್ಟ್ರೀಯ ಗಡಿಯಲ್ಲಿ 4 ಕೆಜಿಗೂ ಹೆಚ್ಚು ಶಂಕಿತ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೋಮವಾರ ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 07th March 2022 11:31 AM | Last Updated: 07th March 2022 11:31 AM | A+A A-

ಡ್ರೋನ್ ಸಾಂದರ್ಭಿಕ ಚಿತ್ರ
ಪಂಜಾಬ್: ಪಂಜಾಬ್ನ ಫಿರೋಜ್ಪುರ ಸೆಕ್ಟರ್ನ ಅಂತರಾಷ್ಟ್ರೀಯ ಗಡಿಯಲ್ಲಿ 4 ಕೆಜಿಗೂ ಹೆಚ್ಚು ಶಂಕಿತ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೋಮವಾರ ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಜಾನೆ 3 ಗಂಟೆ ಸುಮಾರಿಗೆ ಸೈನಿಕರು ಗುನುಗುವ ಶಬ್ದವೊಂದನ್ನು ಸೈನಿಕರು ಕೇಳಿಸಿಕೊಂಡ ನಂತರ ಕ್ವಾಡ್ಕಾಪ್ಟರ್ ಪತ್ತೆಯಾಗಿದೆ. ಅವರು ಡ್ರೋನ್ನತ್ತ ಗುರಿಯಿಟ್ಟು ಪ್ಯಾರಾ ಬಾಂಬ್ ಹಾಕುವುದರೊಂದಿಗೆ ಡ್ರೋನ್ ಹೊಡೆದುರುಳಿಸಿರುವುದಾಗಿ ಅವರು ಹೇಳಿದ್ದಾರೆ.
ಡ್ರೋನ್ಗೆ ಸಣ್ಣ ಹಸಿರು ಬಣ್ಣದ ಚೀಲವನ್ನು ಅಳವಡಿಸಲಾಗಿತ್ತು. ಅದರಲ್ಲಿ ಹಳದಿ ಹೊದಿಕೆಯ ನಾಲ್ಕು ಪ್ಯಾಕೆಟ್ಗಳು ಮತ್ತು ಕಪ್ಪು ಬಣ್ಣದಲ್ಲಿ ಸುತ್ತಲಾದ ಒಂದು ಸಣ್ಣ ಪ್ಯಾಕೆಟ್ ಇತ್ತು ಎಂದು ಅವರು ತಿಳಿಸಿದ್ದಾರೆ.
ಪ್ಯಾಕಿಂಗ್ ವಸ್ತುಗಳೊಂದಿಗೆ ಮಾದಕ ದ್ರವ್ಯದ ತೂಕ 4.17 ಕೆಜಿಯಷ್ಟಾಗಿತ್ತು ಮತ್ತು ಕಪ್ಪು ಬಣ್ಣದಲ್ಲಿ ಸುಮಾರು 250 ಗ್ರಾಂ ಪ್ಯಾಕೇಟ್ ಸುತ್ತಲಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.ಡ್ರೋನ್ನ ಮಾದರಿ ಡಿಜೆಐ ಮ್ಯಾಟ್ರಿಸ್ 300 ಆಟಿಎಕ್ಸ್ ಆಗಿದೆ.