ಎನ್ಎಂಸಿ ಒಪ್ಪಿಗೆಯಿದ್ದರೂ ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್ ನಿಂದ ಇಲ್ಲ ಪ್ರಯೋಜನ!
ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ವಿದೇಶಿ ವೈದ್ಯಕೀಯ ಕಾಲೇಜುಗಳ ಪದವೀಧರರಿಗೆ ಇಂಟರ್ನ್ಶಿಪ್ ಪೂರ್ಣಗೊಳಿಸಲು ಅನುಮತಿ ನೀಡಿದರೂ, ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟವರಲ್ಲಿ ಹೆಚ್ಚಿನವರು ತಮ್ಮ ಪದವಿಪೂರ್ವ MBBS ಕೋರ್ಸ್ಗಳನ್ನು ಪೂರ್ಣಗೊಳಿಸದಿರುವುದರಿಂದ ಇಂಟರ್ನ್ ಷಿಪ್ ಸಹಾಯವಾಗುವ ಸಾಧ್ಯತೆ ಕಡಿಮೆ, ಅದರಿಂದ ಪ್ರಯೋಜನವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.
Published: 07th March 2022 09:51 AM | Last Updated: 07th March 2022 02:27 PM | A+A A-

ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳನ್ನು ಪೋಷಕರು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ವಿದೇಶಿ ವೈದ್ಯಕೀಯ ಕಾಲೇಜುಗಳ ಪದವೀಧರರಿಗೆ ಇಂಟರ್ನ್ಶಿಪ್ ಪೂರ್ಣಗೊಳಿಸಲು ಅನುಮತಿ ನೀಡಿದರೂ, ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟವರಲ್ಲಿ ಹೆಚ್ಚಿನವರು ತಮ್ಮ ಪದವಿಪೂರ್ವ MBBS ಕೋರ್ಸ್ಗಳನ್ನು ಪೂರ್ಣಗೊಳಿಸದಿರುವುದರಿಂದ ಇಂಟರ್ನ್ ಷಿಪ್ ಸಹಾಯವಾಗುವ ಸಾಧ್ಯತೆ ಕಡಿಮೆ, ಅದರಿಂದ ಪ್ರಯೋಜನವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.
ವಿದೇಶದಲ್ಲಿ ವೈದ್ಯಕೀಯ ಪದವಿ ಗಳಿಸಿ ಬಂದ ಸಣ್ಣ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯೋಜನವಾಗಲಿದ್ದು, ಅವರು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ(FMGE)ಗಳನ್ನು ಪಾಸು ಮಾಡಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.
“NMC ಘೋಷಣೆಯು ವೈದ್ಯಕೀಯ ಪದವಿ ಗಳಿಸುತ್ತಿರುವ ಉಕ್ರೇನ್ ನಿಂದ ಸ್ಥಳಾಂತರಗೊಳ್ಳುವ ವಿದ್ಯಾರ್ಥಿಗಳಿಗೆ ಸಹಾಯವಾಗುವುದಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ ರೋಶನ್ ಕೃಷ್ಣನ್ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ನಿಂದ ಬಂದಿದ್ದೇನೋ ಆಯ್ತು: ಕಾಲೇಜುಗಳಲ್ಲಿ ಸೀಟು ಸಂಶಯ, ಅನಿಶ್ಚಿತತೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ
ಉಕ್ರೇನ್ನಲ್ಲಿನ ವೈದ್ಯಕೀಯ ಇಂಟರ್ನ್ಶಿಪ್ ಭಾರತದಲ್ಲಿ ಮಾನ್ಯವಾಗಿಲ್ಲದ ಕಾರಣ, ಎನ್ಎಂಸಿ ಪ್ರಕಟಣೆಯು ತಮ್ಮ ಅಂತಿಮ ಪರೀಕ್ಷೆಗಳನ್ನು ತೆಗೆದುಕೊಂಡು ಪೂರ್ವ ಯುರೋಪಿಯನ್ ದೇಶದಲ್ಲಿ ತರಬೇತಿ ಪಡೆಯುತ್ತಿದ್ದ ಆದರೆ ಯುದ್ಧದ ಕಾರಣ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.
ಉಕ್ರೇನ್, ರಷ್ಯಾ ಮತ್ತು ಇತರ ಪೂರ್ವ ಯುರೋಪಿಯನ್ ರಾಷ್ಟ್ರಗಳಲ್ಲಿನ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಮುಂದುವರಿಸಲು ಮತ್ತು ಅವರ MMBS ಕೋರ್ಸ್ ಅನ್ನು ಪೂರ್ಣಗೊಳಿಸಲು ಸರ್ಕಾರವು ಸಲಹೆಯನ್ನು ನೀಡಿದ್ದರೆ ಅದು ಉತ್ತಮವಾಗಿರುತ್ತದೆ. ಎನ್ಎಂಸಿ ನಿಯಮವು 10 ವರ್ಷಗಳಲ್ಲಿ ಕೋರ್ಸ್ ಪೂರ್ಣಗೊಳಿಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ ಎನ್ನುತ್ತಾರೆ.
ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಬಯಸಿದರೆ, ಸರ್ಕಾರವು ಮಾರ್ಗಸೂಚಿ ಬಿಡುಗಡೆ ಮಾಡಬೇಕು ಎಂದು ದೆಹಲಿ ವೈದ್ಯಕೀಯ ಸಂಘದ ಡಾ ಜಿ ಎಸ್ ಗ್ರೆವಾಲ್ ತಿಳಿಸಿದ್ದಾರೆ.