ಭಾರತದಲ್ಲಿ ಕೊರೋನಾ 4ನೇ ಅಲೆ ಸಂಭವಿಸುವುದಿಲ್ಲ: ವೈರಾಲಜಿಸ್ಟ್ ಟಿ ಜಾಕೋಬ್ ಜಾನ್
ಭಾರತದಲ್ಲಿ ಕೊರೋನಾ ಮೂರನೇ ಅಲೆ ಕೊನೆಗೊಳ್ಳುತ್ತಿದೆ ಎಂದು ಹೇಳಿರುವ ಹೆಸರಾಂತ ವೈರಾಲಜಿಸ್ಟ್ ಡಾ. ಟಿ. ಜಾಕೋಬ್ ಜಾನ್ ಅವರು ವಿಭಿನ್ನವಾಗಿ ವರ್ತಿಸುವ ಅನಿರೀಕ್ಷಿತ ರೂಪಾಂತರಿ ತಳಿ ಬರದ ಹೊರತು ದೇಶದಲ್ಲಿ ನಾಲ್ಕನೇ ತರಂಗ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
Published: 08th March 2022 04:43 PM | Last Updated: 08th March 2022 06:08 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದಲ್ಲಿ ಕೊರೋನಾ ಮೂರನೇ ಅಲೆ ಕೊನೆಗೊಳ್ಳುತ್ತಿದೆ ಎಂದು ಹೇಳಿರುವ ಹೆಸರಾಂತ ವೈರಾಲಜಿಸ್ಟ್ ಡಾ. ಟಿ. ಜಾಕೋಬ್ ಜಾನ್ ಅವರು ವಿಭಿನ್ನವಾಗಿ ವರ್ತಿಸುವ ಅನಿರೀಕ್ಷಿತ ರೂಪಾಂತರಿ ತಳಿ ಬರದ ಹೊರತು ದೇಶದಲ್ಲಿ ನಾಲ್ಕನೇ ತರಂಗ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಬಂದಿರುವ ಹೊಸ ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,993 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಅಂಕಿ ಅಂಶವು ಕಳೆದ 662 ದಿನಗಳಲ್ಲಿ ಕಡಿಮೆಯಾಗಿದೆ. ಈ ವರ್ಷದ ಜನವರಿ 21ರಿಂದ ಕರೋನಾ ಪ್ರಕರಣಗಳಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆ. ಅಂದು ದೇಶದಲ್ಲಿ ಒಟ್ಟು 3,47,254 ಕರೋನಾ ಪ್ರಕರಣಗಳು ವರದಿಯಾಗಿತ್ತು. ಅದು ಈಗ ವೇಗವಾಗಿ 50 ಸಾವಿರಕ್ಕಿಂತ ಕಡಿಮೆಯಾಗಿದೆ. ಮೂರನೇ ಅಲೆ ದುರ್ಬಲಗೊಳ್ಳುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವೈರಾಲಜಿ ಕೇಂದ್ರದ ಮಾಜಿ ನಿರ್ದೇಶಕ ಡಾ.ಜಾನ್ ಹೇಳಿದರು.
ಡಾ. ಜಾನ್ ಹೇಳುವಂತೆ 'ಈ ಸಾಂಕ್ರಾಮಿಕ ರೋಗವು ಈಗ ದುರ್ಬಲಗೊಂಡಿದೆ ಮತ್ತು ಸ್ಥಳೀಯವಾಗಿ ಬದಲಾಗಿದೆ ಎಂದು ನಾನು ನಂಬುತ್ತೇನೆ. ಕಳೆದ 4 ವಾರಗಳಿಂದ ಕರೋನಾ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡು ಬರುತ್ತಿದೆ. ಇಡೀ ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ರೀತಿ, ಮುಂದಿನ ವಾರದಲ್ಲಿ ಪರಿಸ್ಥಿತಿ ಮತ್ತಷ್ಟು ಬದಲಾಗಲಿದೆ ಎಂದು ಅವರು ಹೇಳಿದರು. ಜನರು ವೈರಸ್ನೊಂದಿಗೆ ಬದುಕಲು ಕಲಿತಾಗ ಮತ್ತು ಅವರ ದೇಹವು ಅದನ್ನು ಎದುರಿಸಲು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದಾಗ ಸ್ಥಳೀಯ ಸ್ಥಿತಿಯಾಗಿದೆ ಎಂದು ಅವರು ಹೇಳಿದರು. ಅಲ್ಲದೆ ನಾಲ್ಕನೇ ಅಲೆಯೂ ಬರುವುದಿಲ್ಲ ಎಂದು ಹಲವರು ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ: ಕೋವಿಡ್-19: ದೇಶದಲ್ಲಿ 3,993 ಹೊಸ ಕೇಸುಗಳು ದಾಖಲು, 108 ಮಂದಿ ಸಾವು
ಇದಕ್ಕೆ ಡಾ.ಜಾನ್ ಅವರು ಅಂದಿನ ಪರಿಸ್ಥಿತಿಯ ಮೇಲೆ ಆ ಅಂದಾಜು ಸರಿಯಾಗಿತ್ತು. ಆದರೆ ನಂತರ ಒಮಿಕ್ರಾನ್ ಎಂಬ ಹೊಸ ರೂಪಾಂತರವು ಬಂದು ಪರಿಸ್ಥಿತಿ ವ್ಯತಿರಿಕ್ತವಾಯಿತು. ಇಲ್ಲಿಯವರೆಗೆ ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಓಮಿಕ್ರಾನ್ ನಂತಹ ರೂಪಾಂತರಗಳು ಕಂಡುಬಂದಿವೆ ಎಂದು ಅವರು ಹೇಳಿದರು. ಈ ರೂಪಾಂತರಗಳಲ್ಲಿ ಒಂದರಿಂದ ಹೊಸ ತಳಿ ಕಂಡುಬಂದರೆ ನಂತರ ಪರಿಸ್ಥಿತಿ ಬದಲಾಗಬಹುದು. ಅಂತಹದ್ದೇನೂ ಆಗದಿದ್ದರೆ ಪರಿಸ್ಥಿತಿಯೇ ಸಾಮಾನ್ಯವಾಗಿರುತ್ತದೆ ಎಂದರು.