
ಸುಬ್ರಮಣಿಯನ್ ಸ್ವಾಮಿ
ಚೆನ್ನೈ: ಚೀನಾವನ್ನು ಯುದ್ಧದಲ್ಲಿ ಸೋಲಿಸುವ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನ ಭಾರತದ ಅಗ್ರಮಾನ್ಯ ಶಿಕ್ಷಣ ಸಮ್ಮೇಳನ ಥಿಂಕ್ಎಡುವಿನ 10ನೇ ಆವೃತ್ತಿಯಲ್ಲಿ ಸುಬ್ರಮಣಿಯನ್ ಸ್ವಾಮಿಗೆ 'The Chinese Model: Can India Catch Up?' ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಸ್ವಾಮಿ ಸರಳ ಉತ್ತರ ನೀಡಿದ್ದಾರೆ. ನಾನು ಅವರನ್ನು ಹಿಡಿಯಲು ಬಯಸುವುದಿಲ್ಲ, ನಾನು ಅವರನ್ನು ಹಿಂದಿಕ್ಕಲು ಬಯಸುತ್ತೇನೆ" ಎಂದರು.
We have BJP MP @Swamy39 in the house to talk on 'The Chinese Model: Can India catch up?'#ThinkEdu2022 @iitbombay @IITKanpur @iitmadras @iitdelhi @IITKgp @iiscbangalore @PrabhuChawla pic.twitter.com/t7UuvIBTw0
— The New Indian Express (@NewIndianXpress) March 8, 2022
ಸ್ವಾಮಿಯವರು 'ಚಿಂಗ್ ರಾಜವಂಶಕ್ಕೂ ಮೊದಲು, 2,000 ವರ್ಷಗಳಿಗಿಂತಲೂ ಹೆಚ್ಚು ಕಾಲ, ಚೀನಾ ಭಾರತದ ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿತ್ತು. ಚೀನಾದಲ್ಲಿ ಅದು ಸರ್ವಾಧಿಕಾರವಾಗಿದೆ. ನಾನು ಅದನ್ನು ಅನುಸರಿಸಲು ಬಯಸುವುದಿಲ್ಲ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ThinkEdu 2022: ರಾಜ್ಯ ಸರ್ಕಾರಗಳು ಎನ್ಇಪಿ ಜಾರಿಗೆ ತರಬೇಕು ಎಂದ ವೆಂಕಯ್ಯ ನಾಯ್ಡು
ನಾವು ನಿಜವಾಗಿಯೂ ಯುದ್ಧದಲ್ಲಿ ಚೀನಾವನ್ನು ಸೋಲಿಸಲು ನಿರ್ಧರಿಸಬೇಕು. ಅದು ಸಂಭವಿಸಿದರೆ, ಇಡೀ ಜಗತ್ತು ನಮ್ಮನ್ನು ಬೆಂಬಲಿಸುತ್ತದೆ. ನಮ್ಮಲ್ಲಿ ಮಾತ್ರ ಈ ಸಾಮರ್ಥ್ಯವಿದ್ದು ನಮ್ಮ ಯೋಧರ ಆತ್ಮಸ್ಥೈರ್ಯ ಆಗಾದವಾಗಿದೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸ್ವಾಮಿ, ಭಾರತದ ಒಂದಿಂಚು ಭೂಮಿಯನ್ನು ಚೀನಿಯರು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿ ಚೀನಿಯರ ವಿರುದ್ಧ ಹೋರಾಡುತ್ತಿದ್ದಾರೆಯೇ? ಚೀನಿಗರು 4,000 ಚದರ ಕಿಮೀ ಆಕ್ರಮಿಸಿಕೊಂಡಾಗ ಮೋದಿ ಚೀನಾ ಸೇನೆ ನಮ್ಮ ಪ್ರದೇಶದೊಳಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಯಾವಾಗಲೂ ಪಕ್ಷದ ನಿಲುವನ್ನು ಅನುಸರಿಸುವ ಅಗತ್ಯವಿಲ್ಲ. ಕೆಲವೊಮ್ಮೆ ನಮ್ಮ ಸಿದ್ಧಾಂತಗಳ ಪರವಾಗಿ ನಿಲ್ಲಬೇಕು ಎಂದರು.