ಪಂಚರಾಜ್ಯ ಚುನಾವಣೆ: ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರ; ಮತ ಎಣಿಕೆಗೆ ವೇದಿಕೆ ಸಜ್ಜು
ವಾರಣಾಸಿಯಲ್ಲಿ ಇವಿಎಂ, ವಿದ್ಯುನ್ಮಾನ ಮತಯಂತ್ರಗಳನ್ನು ಅನಧಿಕೃತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂಬ ಸಮಾಜವಾದಿ ಪಕ್ಷದ ಆರೋಪ ವಿವಾದಕ್ಕೆ ಕಾರಣವಾಗಿತ್ತು.
Published: 09th March 2022 11:48 PM | Last Updated: 09th March 2022 11:53 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶ ತಿಳಿಯಲು ದೇಶವೇ ಕಾತರವಾಗಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಗುರುವಾರ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ಕಾವು ಏರುತ್ತಿದೆ. ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ.
ಇದನ್ನೂ ಓದಿ: ಉಕ್ರೇನ್ ಸ್ಥಳಾಂತರ ಕಾರ್ಯಾಚರಣೆಯ ಕ್ರೆಡಿಟ್ ಮೋದಿಗೆ ಅರ್ಪಣೆ; ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿ
ವಾರಣಾಸಿಯಲ್ಲಿ ಇವಿಎಂ, ವಿದ್ಯುನ್ಮಾನ ಮತಯಂತ್ರಗಳನ್ನು ಅನಧಿಕೃತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂಬ ಸಮಾಜವಾದಿ ಪಕ್ಷದ ಆರೋಪ ವಿವಾದಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಚುನಾವಣಾ ಆಯೋಗ ಬದಲಾಯಿಸಿತ್ತು.
ಇದನ್ನೂ ಓದಿ: 66ನೇ ವಸಂತಕ್ಕೆ ಕಾಲಿಟ್ಟ ಶಶಿ ತರೂರ್: ಅಮಿತ್ ಶಾ ಫೋನ್ ಕರೆಯಿಂದ ಅಚ್ಚರಿ
ಈ ಬಾರಿಯ ಚುನಾವಣೆ ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿರುವುದರಿಂದ ಪಕ್ಷಗಳು ಹಿರಿಯ ನಾಯಕರನ್ನು ರಾಜ್ಯಗಳಿಗೆ ಕಳುಹಿಸಿವೆ. ಐದು ರಾಜ್ಯಗಳಲ್ಲಿ ಸುಮಾರು 1,200 ಸಭಾಂಗಣಗಳನ್ನು ಮತ ಎಣಿಕೆ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಲಾಗಿದೆ.
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಅಪರಾಧಿ ಎಜಿ ಪೆರಾರಿವಾಲನ್ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು!
50,000ಕ್ಕೂ ಹೆಚ್ಚು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆಗೆ ಮತಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್: ಸುಮಿ ನಗರದಿಂದ 700 ಭಾರತೀಯರ ರಕ್ಷಣೆ; ಗುರುವಾರ ವಿಮಾನದಲ್ಲಿ ಸ್ವದೇಶಕ್ಕೆ ವಾಪಸ್