ThinkEdu 2022: ಕರ್ನಾಟಕದ ಹಿಜಾಬ್ ವಿವಾದ ಒಂದು ಪಿತೂರಿ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಹಿಜಾಬ್ ಅತ್ಯಗತ್ಯ ಎಂದು ಹೇಳುವ ಮೂಲಕ ಮುಸ್ಲಿಂ ಮಹಿಳೆಯರನ್ನು ಅವರ ಮನೆಯೊಳಗೆ ಕೂರಿಸುವಂತೆ ತಳ್ಳುವಂತೆ ಮಾಡುತ್ತದೆ ಎಂದು ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

Published: 09th March 2022 01:55 PM  |   Last Updated: 09th March 2022 02:32 PM   |  A+A-


Kerala Governor Arif Mohammed Khan speaks during the ThinkEdu Conclave in Chennai

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಚೆನ್ನೈನಲ್ಲಿ ನಡೆದ ಥಿಂಕ್‌ಎಡು ಕಾನ್‌ಕ್ಲೇವ್‌ನಲ್ಲಿ ಮಾತನಾಡಿದರು

The New Indian Express

ಚೆನ್ನೈ: ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಹಿಜಾಬ್ ಅತ್ಯಗತ್ಯ ಎಂದು ಹೇಳುವ ಮೂಲಕ ಮುಸ್ಲಿಂ ಮಹಿಳೆಯರನ್ನು ಅವರ ಮನೆಯೊಳಗೆ ಕೂರಿಸುವಂತೆ ತಳ್ಳುವಂತೆ ಮಾಡುತ್ತದೆ ಎಂದು ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್ ಎಡು ಸಮ್ಮೇಳನದ ಹತ್ತನೇ ಆವೃತಿಯಲ್ಲಿ(ThinkEdu 2022 ) ಇಂದು ಭಾಗವಹಿಸಿ ಮಾತನಾಡಿರುವ ಅವರು, 'ಶಿಕ್ಷಣ: ಗುರುತಿಸುವಿಕೆಗಳಿಗೆ ಬಲಿ'-‘Education: Victim of Identities’ ಎಂಬ ವಿಷಯ ಕುರಿತು ಮಾತನಾಡಿದ ಕೇರಳ ರಾಜ್ಯಪಾಲರು, ನಮ್ಮ ಸಮಾಜದಲ್ಲಿ ಹಲವು ಮುಸ್ಲಿಮರು ಕಟ್ಟುಪಾಡುಗಳನ್ನು ಮುರಿದು ದೇಶದ ಭದ್ರತಾ ಪಡೆಯನ್ನು ಸೇರಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಜಾಬ್ ಇಸ್ಲಾಂನಲ್ಲಿ ಅಂತರ್ಗತವಾಗಿದೆ ಎಂದು ಹೇಳುವುದು ಅವರಿಗೆ ಅಪಚಾರವಾಗುತ್ತದೆ. ಇದು ಅವರ ನಂಬಿಕೆಯ ಅಗತ್ಯ ಸಿದ್ಧಾಂತವನ್ನು ಅನುಸರಿಸಲು ಸಾಧ್ಯವಾಗದ ಅಪರಾಧಕ್ಕೆ ಅವರನ್ನು ತಳ್ಳುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಆದ ಹಿಜಾಬ್ ವಿವಾದವನ್ನು ಉಲ್ಲೇಖಿಸಿದ ಅವರು, ಶಿಕ್ಷಣ ಸಂಸ್ಥೆಗಳು ಅವರದ್ದೇ ಆದ ವಸ್ತ್ರ ಸಂಹಿತೆಯನ್ನು ಸೂಚಿಸಬಹುದಾಗಿದ್ದು ಇದು ಹಲವು ವರ್ಷಗಳಿಂದ ಜಾರಿಯಲ್ಲಿದೆ. ಹಿಜಾಬ್ ವಿವಾದವಲ್ಲ, ಇದೊಂದು ಪಿತೂರಿ ಎಂದು ನಾನು ಹೇಳುತ್ತೇನೆ ಎಂದರು.

ಇಂತಹ ಪಿತೂರಿಗಳು ಮುಸ್ಲಿಂ ಮಹಿಳೆಯರ ವೃತ್ತಿ ಭವಿಷ್ಯವನ್ನು ಸೀಮಿತಗೊಳಿಸಿ ಅವರು ಶಿಕ್ಷಣದ ಮೇಲೆ ಹೊಂದಿರುವ ಆಸಕ್ತಿಯನ್ನು ಸಹ ತಗ್ಗಿಸುತ್ತದೆ ಎಂದರು.

ಇದನ್ನೂ ಓದಿ: ThinkEdu2022: ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಧಾರ್ಮಿಕ ಉಡುಗೆ ತೊಡುವ ಪ್ರಶ್ನೆಯೇ ಇಲ್ಲ: ಅಶ್ವತ್ಥನಾರಾಯಣ

1986ರಲ್ಲಿ ರಾಜೀವ್ ಗಾಂಧಿ ಸರ್ಕಾರವು ಶಾ ಬಾನೋ ತೀರ್ಪನ್ನು ರದ್ದುಗೊಳಿಸಿದ್ದನ್ನು ಉಲ್ಲೇಖಿಸಿದ ರಾಜ್ಯಪಾಲರು, ಹಿಜಾಬ್ ವಿವಾದವನ್ನು ಮುಂದುವರಿಸುತ್ತಿರುವ ಒಂದು ನಿರ್ದಿಷ್ಟ ವರ್ಗವು ಪ್ರಸ್ತುತ ಸರ್ಕಾರದೊಂದಿಗೆ ಅದೇ ರೀತಿಯ ಪ್ರಭಾವವನ್ನು ಅನುಭವಿಸಲು ಸಾಧ್ಯವಾಗದ ಕಾರಣ ಆತಂಕಕ್ಕೊಳಗಾಗಿದೆ ಎಂದು ಹೇಳಿದರು. 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ತ್ರಿವಳಿ ತಲಾಖ್ ಕಾನೂನೊಂದಿಗೆ, ವಿಚ್ಛೇದನ ದರಗಳಲ್ಲಿ ಶೇಕಡಾ 90ರಷ್ಟು ಕಡಿಮೆಯಾಗಿದ್ದು, ಅಮೂಲಾಗ್ರ ಬದಲಾವಣೆಯಾಗಿದೆ ಎಂದರು.

ಪ್ರಪಂಚದಾದ್ಯಂತದ ನಾಗರಿಕತೆಗಳನ್ನು ನೋಡಿದರೆ, ಪ್ರತಿಯೊಂದು ನಾಗರಿಕತೆಯನ್ನು ನಿರ್ದಿಷ್ಟವಾಗಿ ಮಧ್ಯಕಾಲೀನ ಕಾಲದಲ್ಲಿ ಜನಾಂಗ ಅಥವಾ ಭಾಷೆ ಅಥವಾ ಧಾರ್ಮಿಕ ನಂಬಿಕೆಯಿಂದ ವ್ಯಾಖ್ಯಾನಿಸಲಾಗಿದೆ. ಇದು ಅಲ್ಪಸಂಖ್ಯಾತರನ್ನು ಹೊರಗಿಡಲು ಕಾರಣವಾಗುತ್ತದೆ ನಾವು ಎಲ್ಲಾ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದ್ದೇವೆ ಎಂದು ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: Think Edu 2022: ಶಿಕ್ಷಣದ ಉದ್ದೇಶ ಹಣ ಗಳಿಕೆ ಅಲ್ಲ, ಬದಲಾವಣೆ ತರುವುದು; ಮನಸ್ಥಿತಿಗಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು- ಗೌರ್ ಗೋಪಾಲ್ ದಾಸ್

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ಅವರು, ನೀತಿಯು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಭಾರತೀಯ ಜ್ಞಾನ ಪರಂಪರೆಯನ್ನು ಉತ್ತೇಜಿಸುವ ಸಂಸ್ಥೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲ ಮಾತನಾಡಿ, ಕೇರಳ ರಾಜ್ಯಪಾಲ ಅರಿಫ್ ಅವರು ವಿವಿಧತೆಯಲ್ಲಿ ಏಕತೆಯನ್ನು ನಂಬುತ್ತಾರೆ. ಅವರು ರಾಜಕೀಯ ಗವರ್ನರ್ ಆದರೂ ಜನರ ಮನವೊಲಿಸುವ ಗವರ್ನರ್. ತಜ್ಞರೂ ಹೌದು ಎಂದು ಶ್ಲಾಘಿಸಿದರು. 


Stay up to date on all the latest ದೇಶ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp