ThinkEdu 2022: ಸನಾತನ ಧರ್ಮಕ್ಕಿಂತ ವೆಸ್ಟರ್ನ್ ಚಿಂತನೆ ಶ್ರೇಷ್ಠ ಎನ್ನುವ ನಂಬಿಕೆ ಬಗ್ಗೆ ಬಿಬೆಕ್ ಡೆಬ್ರಾಯ್ ಬೇಸರ
ಮೋದಿ ಅವರ ಆರ್ಥಿಕ ಸಲಹೆಗಾರ ಮಂಡಳಿಯ ಅಧ್ಯಕ್ಷರಾಗಿರುವ ಡೆಬ್ರಾಯ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಆಯೋಜಿಸಿದ್ದ ThinkEdu 2022 ಶೃಂಗದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
Published: 09th March 2022 08:23 PM | Last Updated: 09th March 2022 08:23 PM | A+A A-

ಬಿಬೆಕ್ ಡೆಬ್ರಾಯ್
ಚೆನ್ನೈ: ಭಾರತೀಯ ಧಾರ್ಮಿಕ ಗ್ರಂಥಗಳಲ್ಲಿ ಬರೆದಿರುವ ಮಾಹಿತಿ ವೈಜ್ನಾನಿಕವಾಗಿವೆ. ಆದರೆ ನಾವು ಅದನ್ನು ನಂಬದೆ ಪಾಶ್ಚಿಮಾತ್ಯ ದೇಶಗಳ ಒಪ್ಪಿಗೆಗಾಗಿ ಕಾಯುತ್ತೇವೆ ಎಂದು ಬಿಬೆಕ್ ಡೆಬ್ರಾಯ್ ಹೇಳಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಅಪರಾಧಿ ಎಜಿ ಪೆರಾರಿವಾಲನ್ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು!
ಪ್ರಧಾನಿ ಮೋದಿ ಅವರ ಆರ್ಥಿಕ ಸಲಹೆಗಾರ ಮಂಡಳಿಯ ಅಧ್ಯಕ್ಷರಾಗಿರುವ ಡೆಬ್ರಾಯ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಆಯೋಜಿಸಿದ್ದ ThinkEdu 2022 ಶೃಂಗದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇದನ್ನೂ ಓದಿ: ಉಕ್ರೇನ್: ಸುಮಿ ನಗರದಿಂದ 700 ಭಾರತೀಯರ ರಕ್ಷಣೆ; ಗುರುವಾರ ವಿಮಾನದಲ್ಲಿ ಸ್ವದೇಶಕ್ಕೆ ವಾಪಸ್
ವೆಸ್ಟರ್ನ್ ಚಿಂತನೆಯನ್ನೇ ಶ್ರೇಷ್ಠ ಎನ್ನುವ ನಂಬಿಕೆ ಭಾರತೀಯರಲ್ಲಿ ಬೇರೂರಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ಪರಂಪರೆಯಲ್ಲಿ ಸೂಚಿಸಲಾಗಿರುವ ಆಚರಣೆಗಳನ್ನು ಗೊಡ್ಡು ನಂಬಿಕೆ ಎಂದು ಇಂದಿನವರು ತಳ್ಳಿ ಹಾಕುತ್ತಿದ್ದಾರೆ. ಅದು ತಪ್ಪು. ಪ್ರತಿ ಆಚರಣೆಗೂ ಅದರದ್ದೇ ಆದ ಸಕಾರಣ ಮತ್ತು ಮಹತ್ವ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ ನಿಂದನೆ ಪ್ರಕರಣ: ಉದ್ಯಮಿ ವಿಜಯ್ ಮಲ್ಯ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್