Think Edu 2022: ಶಿಕ್ಷಣದ ಉದ್ದೇಶ ಹಣ ಗಳಿಕೆ ಅಲ್ಲ, ಬದಲಾವಣೆ ತರುವುದು; ಮನಸ್ಥಿತಿಗಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು- ಗೌರ್ ಗೋಪಾಲ್ ದಾಸ್
ಶಿಕ್ಷಣದ ಉದ್ದೇಶ ಹಣ ಗಳಿಸುವುದಲ್ಲ, ಬದಲಾವಣೆ ತರುವುದು ಎಂದು ಧಾರ್ಮಿಕ ಗುರು ಗೌರ್ ಗೋಪಾಲ್ ದಾಸ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್ ಎಡು 10ನೇ ಆವೃತ್ತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
Published: 09th March 2022 09:48 AM | Last Updated: 09th March 2022 02:33 PM | A+A A-

ಗೌರ್ ಗೋಪಾಲ್ ದಾಸ್
ಚೆನ್ನೈ: ಶಿಕ್ಷಣದ ಉದ್ದೇಶ ಹಣ ಗಳಿಸುವುದಲ್ಲ, ಬದಲಾವಣೆ ತರುವುದು ಎಂದು ಧಾರ್ಮಿಕ ಗುರು ಗೌರ್ ಗೋಪಾಲ್ ದಾಸ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್ ಎಡು 10ನೇ ಆವೃತ್ತಿ (Think Edu 2022)ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಬದಲಾವಣೆ ತಂದಾಗ ಹಣ ತನ್ನಿಂತಾನಾಗಿಯೇ ಬರುತ್ತದೆ. ಶಿಕ್ಷಣದ ಗುರಿ ಮತ್ತು ಉದ್ದೇಶ ಬದಲಾವಣೆ ತರುವುದಾಗಿದ್ದು, ಬದಲಾವಣೆ ತಂದಾಗ ಹಣ ತನ್ನಿಂತಾನಾಗಿಯೇ ಬರುತ್ತದೆ. ಆಗ ನೀವು ಗುಂಪಿನಲ್ಲಿ ಗೋವಿಂದ ಎನಿಸದೆ ವಿಶಿಷ್ಟವಾಗಿ ಪ್ರತ್ಯೇಕವಾಗಿ ಎದ್ದು ನಿಲ್ಲುತ್ತೀರಿ ಮತ್ತು ನಿಮ್ಮ ಬೆಲೆ, ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು. ಭಾರತೀಯ ದಾರಿಯಲ್ಲಿ ಸಂತೋಷ ಗಳಿಕೆ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಣವೆನ್ನುವುದು ನಮ್ಮ ಮನೋವೃತ್ತಿಯ ಬದಲಿಗೆ ಕೌಶಲ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಯುವಜನತೆಯ ಒಟ್ಟಾರೆ ಬೆಳವಣಿಗೆಗೆ ನಾವು ಗಮನಹರಿಸಬೇಕು. ಶ್ರದ್ಧೆ ಅಷ್ಟೇ ಮುಖ್ಯವಾಗುತ್ತದೆ. ನೀವು ಯಾವುದಾದರೊಂದು ವಿಷಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೀರಿ, ವಿಶೇಷ ಕೌಶಲ್ಯವಿದೆ, ಆಸಕ್ತಿಯಿದೆ ಎಂದಾದರೆ ಅದಕ್ಕೆ ಬದ್ಧರಾಗಿ ನಿಮ್ಮ ಗುರಿ ತಲುಪಲು ನೋಡಿ. ಅದು ಎಷ್ಟು ಸಮಯ ತೆಗೆದುಕೊಂಡರೂ ಚಿಂತೆಯಿಲ್ಲ. ನೀವು ಈಗ ಸಾಕಷ್ಟು ಶ್ರಮ ಹಾಕದಿದ್ದರೆ ಮುಂದೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುವುದಿಲ್ಲ ಎಂದಿದ್ದಾರೆ.
ಗೋಪಾಲ್ ದಾಸ್ ಅವರು ಹೇಳಿರುವ ಮತ್ತೊಂದು ವಿಷಯವೆಂದರೆ ಯಾವತ್ತೂ ನಿಮ್ಮ ಜೀವನದಲ್ಲಿ ರಾಜಿ ಮಾಡಿಕೊಂಡು ಬೇರೆಯವರ ಜೀವನ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಬೆಳವಣಿಗೆಯನ್ನು ನೀವು ಬೇರೆಯವರ ಜೀವನ ಜೊತೆ ಹೋಲಿಕೆ ಮಾಡುವ ಬದಲು ನಿಮ್ಮ ಜೊತೆಯೇ ಹೋಲಿಕೆ ಮಾಡಿಕೊಳ್ಳಿ. ಹೋಲಿಕೆ ಮಾಡುವುದರಿಂದ ನಿಮ್ಮ ಜೀವನವೇ ಹಾಳಾಗುತ್ತದೆ. ಸ್ವ ಕಾಳಜಿ, ಪ್ರೀತಿ ಮತ್ತು ಸ್ವೀಕರಿಸುವಿಕೆ ಉತ್ತಮ ಮಾನಸಿಕ ಆರೋಗ್ಯ ಮತ್ತು ನಿಮ್ಮನ್ನು ನೀವು ತಿದ್ದಿಕೊಳ್ಳಲು, ಇನ್ನೂ ಉತ್ತಮ ವ್ಯಕ್ತಿಯಾಗಲು ಸಹಾಯ ಮಾಡುತ್ತದೆ ಎಂದರು.
ಇದನ್ನೂ ಓದಿ: ThinkEdu2022: ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಧಾರ್ಮಿಕ ಉಡುಗೆ ತೊಡುವ ಪ್ರಶ್ನೆಯೇ ಇಲ್ಲ: ಅಶ್ವತ್ಥನಾರಾಯಣ
ಥಿಂಕ್ಎಡು 2022 ಎಂಬುದು ಕಳೆದ ದಶಕದಿಂದ ಸತತವಾಗಿ ಭಾರತದ ಅತಿದೊಡ್ಡ ಶಿಕ್ಷಣ ಸಮಾವೇಶವಾಗಿದ್ದು ಈ ವರ್ಷ ಹತ್ತನೇ ಆವೃತ್ತಿಯಾಗಿದೆ. ಕಾರ್ಯಕ್ರಮದಲ್ಲಿ ಭಾರತದ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪರಿಸರ ವ್ಯವಸ್ಥೆಗಳ ಪ್ರಮುಖರು ತಮ್ಮ ಆಲೋಚನೆಗಳು, ಸಿದ್ಧಾಂತಗಳು ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯ ಹಿಂದಿನ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ, ಮಾಜಿ ರಾಷ್ಟ್ರಪತಿಗಳಾದ ಡಾ ಎಪಿಜೆ ಅಬ್ದುಲ್ ಕಲಾಂ ಮತ್ತು ಡಾ ಪ್ರಣಬ್ ಮುಖರ್ಜಿ, ಸಂಸದರಾದ ಜೈರಾಮ್ ರಮೇಶ್, ಸ್ಮೃತಿ ಇರಾನಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ನೀತಿ ಆಯೋಗ್ನ ಸಿಇಒ ಅಮಿತಾಬ್ ಕಾಂತ್ ಮತ್ತು ಆಧ್ಯಾತ್ಮಿಕ ನಾಯಕರನ್ನು ಮತ್ತು ಸದ್ಗುರುಗಳ ಮಾರ್ಗದರ್ಶನವನ್ನು ಸಮಾವೇಶ ಕಂಡಿದೆ.