ವಿದ್ಯುನ್ಮಾನ ಮತಯಂತ್ರ ಬಗ್ಗೆ ಅಖಿಲೇಶ್ ಯಾದವ್ ಗಂಭೀರ ಆರೋಪ: ಮೂವರು ಅಧಿಕಾರಿಗಳನ್ನು ಕರ್ತವ್ಯದಿಂದ ತೆಗೆದುಹಾಕಿದ ಚುನಾವಣಾ ಆಯೋಗ

ವಿದ್ಯುನ್ಮಾನ ಮತ ಯಂತ್ರಗಳನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪ ಮಾಡಿದ ನಂತರ ಚುನಾವಣಾ ಆಯೋಗ ಉತ್ತರ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಿಂದ ಮೂವರು ಅಧಿಕಾರಿಗಳನ್ನು ತೆಗೆದುಹಾಕಿದೆ.

Published: 10th March 2022 08:42 AM  |   Last Updated: 10th March 2022 08:42 AM   |  A+A-


SP workers check a loaded truck for EVMs in Gorakhpur on Wednesday.

ಟ್ರಕ್ ನಲ್ಲಿ ಇವಿಎಂಗಳನ್ನು ತುಂಬಿರುವುದನ್ನು ಸಮಾಜವಾದಿ ಪಕ್ಷ ನಾಯಕರು ತಪಾಸಣೆ ಮಾಡುತ್ತಿರುವುದು

The New Indian Express

ಲಕ್ನೊ/ ನವದೆಹಲಿ: ವಿದ್ಯುನ್ಮಾನ ಮತ ಯಂತ್ರಗಳನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪ ಮಾಡಿದ ನಂತರ ಚುನಾವಣಾ ಆಯೋಗ ಉತ್ತರ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಿಂದ ಮೂವರು ಅಧಿಕಾರಿಗಳನ್ನು ತೆಗೆದುಹಾಕಿದೆ.

ವಾರಣಾಸಿಯಲ್ಲಿ ಇವಿಎಂಗಳ ನೋಡಲ್ ಅಧಿಕಾರಿ, ಸೋನ್‌ಭದ್ರಾ ಜಿಲ್ಲೆಯ ಚುನಾವಣಾಧಿಕಾರಿ (ಆರ್‌ಒ) ಮತ್ತು ಬರೇಲಿ ಜಿಲ್ಲೆಯ ಹೆಚ್ಚುವರಿ ಚುನಾವಣಾ ಅಧಿಕಾರಿಯನ್ನು ಉತ್ತರ ಪ್ರದೇಶದಲ್ಲಿ ಮತ ಎಣಿಕೆಗೆ ಒಂದು ದಿನ ಮುಂಚಿತವಾಗಿ ಚುನಾವಣಾ ಕರ್ತವ್ಯದಿಂದ ಹಿಂತೆಗೆದುಕೊಳ್ಳಲಾಗಿದೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ ಎಣಿಕೆ ಪ್ರಕ್ರಿಯೆಯ ವೆಬ್‌ಕಾಸ್ಟಿಂಗ್ ಕೋರಿ ಇಸಿಗೆ ಪತ್ರವನ್ನು ಬರೆದಿದ್ದರು. ವಾರಣಾಸಿಯಲ್ಲಿ ಮತಯಂತ್ರಗಳ ದುರ್ಬಳಕೆಯ ಕುರಿತು ಗಂಭೀರ ಆರೋಪ ಮಾಡಿದ ನಂತರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯನ್ನು ವೆಬ್‌ಕಾಸ್ಟಿಂಗ್ ಮಾಡಬೇಕು. ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರು, ಮತಗಟ್ಟೆ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗೆ ಮತ ಎಣಿಕೆಯ ಕೊಂಡಿಯನ್ನು ಹಂಚಿಕೊಳ್ಳಬೇಕು. ರಾಜಕೀಯ ಪಕ್ಷಗಳು ಎಣಿಕೆ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಬಹುದು. ಒಟ್ಟಾರೆ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಸ್ವತಂತ್ರವಾಗಿ ನಡೆಸಬಹುದು ಎಂದು ಚುನಾವಣಾ ಆಯೋಗಕ್ಕೆ ಅಖಿಲೇಶ್ ಯಾದವ್ ಪತ್ರ ಬರೆದಿದ್ದರು.

ಇವಿಎಂಗಳನ್ನು ದುರ್ಬಳಕೆ ಮಾಡುವ ಮೂಲಕ ಆಡಳಿತ ಪಕ್ಷವು "ಮತಗಳನ್ನು ಕದಿಯಲು" ಪ್ರಯತ್ನಿಸುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ಅಯೋಧ್ಯೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದಾಗಿ ಬಿಜೆಪಿ ಭಯಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವಂತೆ ಚುನಾವಣಾಧಿಕಾರಿಗೆ ಮನವಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು. 


Stay up to date on all the latest ರಾಷ್ಟ್ರೀಯ news
Poll
Vidhana Saudha

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp