ಕಾನೂನು ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾತಿ ಅಗತ್ಯ: ಸಿಜೆಐ ಎನ್.ವಿ.ರಮಣ 

ಸದ್ಯ ಸುಪ್ರೀಂ ಕೋರ್ಟಿನಲ್ಲಿರುವ ಮಹಿಳಾ ನ್ಯಾಯಾಧೀಶರ ಸಂಖ್ಯೆ 4. ನ್ಯಾಯಾಲಯಗಳ ಇತಿಹಾಸದಲ್ಲೇ ಇದು ಅತ್ಯಧಿಕ ಎಂದು ರಮಣ ಹೇಳಿದರು. 
ಚೀಫ್ ಜಸ್ಟೀಸ್ ಆಫ್ ಇಂಡಿಯಾ ಎನ್.ವಿ.ರಮಣ
ಚೀಫ್ ಜಸ್ಟೀಸ್ ಆಫ್ ಇಂಡಿಯಾ ಎನ್.ವಿ.ರಮಣ

ನವದೆಹಲಿ: ಚೀಫ್ ಜಸ್ಟೀಸ್ ಆಫ್ ಇಂಡಿಯಾ ಎನ್.ವಿ.ರಮಣ ಅವರು ದೇಶದ ಕಾನೂನು ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾತಿ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 

ತೆಲಂಗಾಣ, ಅಸ್ಸಾಂ, ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳ ಜುಡೀಶಿಯಲ್ ಅಧಿಕಾರಿಗಳಲ್ಲಿ ಪುರುಷರ ಪ್ರಮಾಣದಷ್ಟೇ ಹೆಣ್ಣುಮಕ್ಕಳಿದ್ದಾರೆ. ಅದಕ್ಕೆ ಅಲ್ಲಿ ನೀಡಲಾಗಿರುವ ಮೀಸಲಾತಿ ಕಾರಣ ಎಂದು ರಮಣ ಹೇಳಿದ್ದಾರೆ.

ಇದೇ ಮಾದರಿಯ ಮೀಸಲಾತಿ ಎಲ್ಲಾ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಜಾರಿಯಾಗಬೇಕು ಎಂದು ರಮಣ ಅವರು ಪ್ರತಿಪಾದಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ನ್ಯಾಯಾಧೀಶರ ದಿನ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ಸದ್ಯ ಸುಪ್ರೀಂ ಕೋರ್ಟಿನಲ್ಲಿರುವ ಮಹಿಳಾ ನ್ಯಾಯಾಧೀಶರ ಸಂಖ್ಯೆ 4. ನ್ಯಾಯಾಲಯಗಳ ಇತಿಹಾಸದಲ್ಲೇ ಇದು ಅತ್ಯಧಿಕ ಎಂದು ರಮಣ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com