ಮಣಿಪುರದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಬಿಜೆಪಿ, ಎರಡನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್
ಮಣಿಪುರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ಆರಂಭಿಕ ಮತ ಎಣಿಕೆ ಪ್ರಕಾರ ಭಾರತೀಯ ಜನತಾ ಪಾರ್ಟಿ 9 ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ, ಸಂಯುಕ್ತ ಜನತಾ ದಳ ಮೂರು ಸೀಟುಗಳಲ್ಲಿ ಮುನ್ನಡೆಯಲ್ಲಿವೆ.
Published: 10th March 2022 11:11 AM | Last Updated: 10th March 2022 11:11 AM | A+A A-

ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್
ಇಂಫಾಲ್(ಮಣಿಪುರ): ಮಣಿಪುರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ಆರಂಭಿಕ ಮತ ಎಣಿಕೆ ಪ್ರಕಾರ ಭಾರತೀಯ ಜನತಾ ಪಾರ್ಟಿ 9 ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ, ಸಂಯುಕ್ತ ಜನತಾ ದಳ ಮೂರು ಸೀಟುಗಳಲ್ಲಿ ಮುನ್ನಡೆಯಲ್ಲಿವೆ.
ಇಂದು ಬೆಳಗ್ಗಿನ ಮತ ಎಣಿಕೆ ಪ್ರಕಾರ, ಪಕ್ಷಗಳಾದ ಕುಕಿ ಪೀಪಲ್ಸ್ ಅಲೈಯನ್ಸ್, ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಲೆ) ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಇದಲ್ಲದೆ, ಬಿಜೆಪಿ ಮತ ಹಂಚಿಕೆಯಲ್ಲಿ ಶೇಕಡಾ 45.05 ರಷ್ಟು ಮುನ್ನಡೆ ಸಾಧಿಸಿದೆ ಮತ್ತು ಕಾಂಗ್ರೆಸ್ ಶೇಕಡಾ 20.66 ರಷ್ಟು ಮತಗಳನ್ನು ಗಳಿಸಿದೆ.
ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ರಾಜ್ಯದಲ್ಲಿ ದಾಖಲೆಯ ಶೇ.89.3ರಷ್ಟು ಮತದಾನವಾಗಿದೆ. ಇಂದು ಬೆಳಗ್ಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜ್ಯದ ಭವಿಷ್ಯ ಮತ್ತು ಅದರ ಅಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸದ್ಯಕ್ಕೆ ಸಿಎಂ ಎನ್ ಬಿರೇನ್ ಸಿಂಗ್ ಹೀಂಗಾಂಗ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.