ಪಕ್ಷದ ಗೆಲುವಲ್ಲ, ರಾಜ್ಯದ ಜನತೆಗೆ ಸಂದ ಗೆಲುವು: ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್
ಪಕ್ಷದ ಕಾರ್ಯಕರ್ತರು ಬೆವರು ಮತ್ತು ರಕ್ತವನ್ನು ಹರಿಸಿ ಪಟ್ಟ ಶ್ರಮ ಜನರನ್ನು ತಲುಪಿದೆ. ಪಕ್ಷದ ನಾಯಕರ ನಾಯಕತ್ವವನ್ನು ಜನರು ಒಪ್ಪಿದ್ದಾರೆ
Published: 10th March 2022 07:30 PM | Last Updated: 10th March 2022 07:30 PM | A+A A-

ಸ್ವತಂತ್ರ ದೇವ್ ಸಿಂಗ್
ಲಖನೌ: ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದ ಬಿಜೆಪಿ ಪಕ್ಷಕ್ಕೆ ಭಾರೀ ಗೆಲುವು ಸಿಕ್ಕಿದೆ. ಈ ಗೆಲುವು ರಾಜ್ಯದ ಜನರ ಗೆಲುವು ಎಂದು ಪಕ್ಷದ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ಪಕ್ಷ ರಾಜ್ಯದಲ್ಲಿ ಕಡೆಗಣಿಸಲ್ಪಟ್ಟ ವರ್ಗದವರ ರಕ್ಷಣೆಗೆ ಮಹತ್ವದ ಕೆಲಸ ಮಾಡಿದೆ. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದೆ. ಇವೆಲ್ಲದರ ಫಲವೇ ಈ ಚುನಾವಣೆಯ ಗೆಲುವು ಎಂಡು ಅವರು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಇದೇ ಕಾರಣದಿಂದ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ! ಪಕ್ಷದ ಮುಖಂಡರು ಏನಂತಾರೆ?
ಪಕ್ಷದ ಕಾರ್ಯಕರ್ತರು ಬೆವರು ಮತ್ತು ರಕ್ತವನ್ನು ಹರಿಸಿ ಪಟ್ಟ ಶ್ರಮ ಜನರನ್ನು ತಲುಪಿದೆ. ಪಕ್ಷದ ನಾಯಕರ ನಾಯಕತ್ವವನ್ನು ಜನರು ಒಪ್ಪಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ರಶಾಂತ್ ಕಿಶೋರ್ ರೊಂದಿಗಿನ ಒಪ್ಪಂದ ನವೀಕರಿಸಲಿದೆ ಟಿಎಂಸಿ, ಸಲಹೆಗಾರರಾಗಿ ನೇಮಕ
ಸಮಾಜವಾದಿ ಪಕ್ಷ ಜಾತಿ ರಾಜಕಾರಣ ಮಾಡಿ ಮತಗಳನ್ನು ಸೆಳೆಯುತ್ತಿದೆ. ಆದರೆ ಬಿಜೆಪಿ ಪಕ್ಷ ಅಭಿವೃದ್ಧಿಯ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಅದನ್ನು ಜನರು ಮೆಚ್ಚಿದ್ದಾರೆ. ಎಂದು ಸ್ವತಂತ್ರ ದೇವ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಫಲಿತಾಂಶ: ಚುನಾವಣಾ ಫಲಿತಾಂಶದಿಂದ ನಿರಾಸೆಯಾಗಿದೆ, ಆದರೆ ಧೈರ್ಯ ಕಳೆದುಕೊಂಡಿಲ್ಲ- ಕಾಂಗ್ರೆಸ್