'ಈ ಕ್ರಾಂತಿಗೆ' ಪಂಜಾಬ್ ಜನತೆಗೆ ಅಭಿನಂದನೆಗಳು: ಆಪ್ ಗೆಲುವಿನ ಸಂಭ್ರಮವನ್ನು ಬಣ್ಣಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೇಶದಲ್ಲಿ ಪೊರಕೆ ಗುರುತಿನ ಆಪ್ ಪಕ್ಷ ಭಾರೀ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ಪಂಜಾಬ್ ನಲ್ಲಿ ಇಂದು ನಿರ್ಮಿಸಿದ ಇತಿಹಾಸ. ಕಾಂಗ್ರೆಸ್ ನ ನಾಯಕರಿಗೆಲ್ಲಾ ಸೋಲಿನ ರುಚಿ ತೋರಿಸಿ ಆಪ್ ಸರ್ಕಾರ ರಚಿಸುವತ್ತ ಹೆಜ್ಜೆ ಇಡುತ್ತಿದೆ.
Published: 10th March 2022 01:11 PM | Last Updated: 10th March 2022 01:24 PM | A+A A-

ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಜೊತೆ ಸಿಎಂ ಅರವಿಂದ್ ಕೇಜ್ರಿವಾಲ್
ನವದೆಹಲಿ: ದೇಶದಲ್ಲಿ ಪೊರಕೆ ಗುರುತಿನ ಆಪ್ ಪಕ್ಷ ಭಾರೀ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ಪಂಜಾಬ್ ನಲ್ಲಿ ಇಂದು ನಿರ್ಮಿಸಿದ ಇತಿಹಾಸ. ಕಾಂಗ್ರೆಸ್ ನ ನಾಯಕರಿಗೆಲ್ಲಾ ಸೋಲಿನ ರುಚಿ ತೋರಿಸಿ ಆಪ್ ಸರ್ಕಾರ ರಚಿಸುವತ್ತ ಹೆಜ್ಜೆ ಇಡುತ್ತಿದೆ.
ಪಂಜಾಬ್‌ನಲ್ಲಿ ಆಪ್ ಸರಳ ಬಹುಮತ ಪಡೆಯುತ್ತಿದ್ದಂತೆ, ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ "ಈ ಕ್ರಾಂತಿಗಾಗಿ" ರಾಜ್ಯದ ಜನರನ್ನು ಅಭಿನಂದಿಸಿದ್ದಾರೆ. ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
इस इंक़लाब के लिए पंजाब के लोगों को बहुत-बहुत बधाई। pic.twitter.com/BIJqv8OnGa
— Arvind Kejriwal (@ArvindKejriwal) March 10, 2022
ಟ್ವೀಟ್‌ನಲ್ಲಿ, ಅವರು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಸಂಸದ ಭಗವಂತ್ ಮಾನ್ ಅವರೊಂದಿಗೆ ನಿಂತಿರುವ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ, ಇಬ್ಬರೂ ನಾಯಕರು ವಿಜಯದ ಚಿಹ್ನೆಯನ್ನು ತೋರಿಸುತ್ತಿದ್ದಾರೆ.
ಮಧ್ಯಾಹ್ನ 12:30 ಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, 117 ವಿಧಾನಸಭಾ ಸ್ಥಾನಗಳಲ್ಲಿ 90 ರಲ್ಲಿ ಎಎಪಿ ಮುನ್ನಡೆ ಸಾಧಿಸಿದೆ. ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್‌ಎಡಿ ಹೆಚ್ಚು ಪ್ರಭಾವ ಬೀರಲು ವಿಫಲವಾಗಿದೆ.
ದೆಹಲಿಯಲ್ಲಿ ಎಎಪಿ ಕಾರ್ಯಕರ್ತರು ಪಕ್ಷದ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪಂಜಾಬಿ ಹಾಡುಗಳಿಗೆ ನೃತ್ಯ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.