ಪಂಜಾಬ್ ಫಲಿತಾಂಶ: ಮೋಗಾದಲ್ಲಿ ಸೋನು ಸೂದ್ ಸಹೋದರಿ ಮಾಳವಿಕಾಗೆ ಹೀನಾಯ ಸೋಲು

ಪಂಜಾಬ್‌ನ ಮೊಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದ ಖ್ಯಾತ ಬಾಲಿವುಡ್ ನಟ ಸೋನು ಸೂದ್‌ ಅವರ ಸಹೋದರಿ ಮಾಳವಿಕಾ ಸೂದ್‌ ಅವರು ಆಪ್ ಅಭ್ಯರ್ಥಿ ಡಾ.ಅಮನದೀಪ್ ಕೌರ್ ಅವರ ವಿರುದ್ಧ ಹೀನಾಯ ಸೋಲು...
ಸೋನು ಸೂದ್ - ಮಾಳವಿಕಾ
ಸೋನು ಸೂದ್ - ಮಾಳವಿಕಾ

ಮೋಗಾ: ಪಂಜಾಬ್‌ನ ಮೊಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದ ಖ್ಯಾತ ಬಾಲಿವುಡ್ ನಟ ಸೋನು ಸೂದ್‌ ಅವರ ಸಹೋದರಿ ಮಾಳವಿಕಾ ಸೂದ್‌ ಅವರು ಆಪ್ ಅಭ್ಯರ್ಥಿ ಡಾ.ಅಮನದೀಪ್ ಕೌರ್ ಅವರ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ.

ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. 1977ರಿಂದ 2017ರ ವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿಂದ ಆರು ಬಾರಿ ಗೆದ್ದಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಹರ್ಜೋತ್ ಸಿಂಗ್ ಗೆದ್ದಿದ್ದರು. ಆದರೆ ಕಾಂಗ್ರೆಸ್ ಶಾಸಕರಾಗಿದ್ದ ಹರ್ಜೋತ್ ಸಿಂಗ್ ಅವರು ಬಿಜೆಪಿ ಸೇರಿದ ಕಾರಣಕ್ಕೆ ಮಾಳವಿಕಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು,

ಸೋನು ಸೂದ್ ಅವರ ಸಹೋದರಿ ಮಾಳವಿಕಾ ಅವರು ಕಳೆದ ಜನವರಿಯಲ್ಲಿ ಕಾಂಗ್ರೆಸ್ ಸೇರಿದ್ದರು. ಮಾಳವಿಕಾ ಪರ ಸೋನು ಸೂದ್ ಅವರು ಪ್ರಚಾರ ನಡೆಸಿದರೂ ನಟನ ಸಮಾಜಮುಖಿ ಕಾರ್ಯಗಳು ಸಹೋದರಿಗೆ ಗೆಲುವು ತಂದುಕೊಡಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com