
ಮುಖ್ಯಮಂತ್ರಿ ಬಿಜೆಪಿ ನಾಯಕ ಬಿರೇನ್ ಸಿಂಗ್
ಗುವಾಹಟಿ: ಬಿಜೆಪಿ ಪಕ್ಷ ಮಣಿಪುರದಲ್ಲಿ NPP ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ಬಿಜೆಪಿ ಹೊಸ ರಾಗ ಹಾಡುತ್ತಿದೆ.
ಇದನ್ನೂ ಓದಿ: AAP ಮುಖ್ಯಕಚೇರಿಯಲ್ಲಿ ಮುಗಿಲುಮುಟ್ಟಿದ ಕಾರ್ಯಕರ್ತರ ಸಂಭ್ರಮ: ಪಂಜಾಬಿ ಹಾಡಿಗೆ ಡ್ಯಾನ್ಸ್
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತ ಗಳಿಸಿದೆ. ರಾಜ್ಯದ 60 ಸೀಟುಗಳಲ್ಲಿ 32 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. 1950ರ ನಂತರ ರಾಜ್ಯದಲ್ಲಿ ಎರಡನೇ ಬಾರಿಗೆ ಬಹುಮತ ಗಳಿಸಿದ ಪಕ್ಷ ಎನ್ನುವ ಹೆಸರಿಗೆ ಬಿಜೆಪಿ ಪಾತ್ರವಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ 2012ರಲ್ಲಿ 42 ಸೀಟುಗಳನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: 2024 ರ ಲೋಕಸಭಾ ಚುನಾವಣೆಯ ದಿಕ್ಸೂಚಿ- ಪ್ರಧಾನಿ ನರೇಂದ್ರ ಮೋದಿ
ಮಿತ್ರಪಕ್ಷವಾಗಿದ್ದರೂ ಕಳೆದ ವರ್ಷಗಳಲ್ಲಿ ಬಿಜೆಪಿ, NPP ಪಕ್ಷದ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಚುನಾವಣಾ ಪ್ರಚಾರ ಸಮಯದಲ್ಲೇ ತಾನು NPP ಜೊತೆ ಸೇರಿ ಸರ್ಕಾರ ರಚಿಸುವುದಿಲ್ಲವೆಂದು ಬಿಜೆಪಿ ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: ಪಕ್ಷದ ಗೆಲುವಲ್ಲ, ರಾಜ್ಯದ ಜನತೆಗೆ ಸಂದ ಗೆಲುವು: ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್