
ಸಾಂದರ್ಭಿಕ ಚಿತ್ರ
ಕೋಲ್ಕತಾ: ಶಿಕ್ಷಣದ ಮಹತ್ವವನ್ನು ಒತ್ತಿ ಸಾರುವ ಘಟನೆ ಪ.ಬಂಗಾಳದಲ್ಲಿ ನಡೆದಿದೆ. ಮದುವೆಗೆ ಒತ್ತಾಯಿಸಿ ಟೀನೇಜ್ ಹುಡುಗಿಯನ್ನು ಮನೆಯವರು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.
ಇದನ್ನೂ ಓದಿ: ಸಿಬಿಎಸ್ ಇ 10, 12ನೇ ತರಗತಿಯ ಎರಡನೆ ಅವಧಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಆರಂಭ
ಆಕೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದರೂ ಮನೆಯವರು ಪರೀಕ್ಷೆ ಬರೆಯಲು ಬಿಟ್ಟಿರಲಿಲ್ಲ. ಪರೀಕ್ಷೆ ಬರೆದು ಉತ್ತೀರ್ಣಳಾಗಿ ಎಲ್ಲಿ ಶಿಕ್ಷಣ ನೆಪದಲ್ಲಿ ಮದುವೆ ನಿರಾಕರಿಸುತ್ತಾರೋ ಎನ್ನುವುದು ಮನೆಯವರ ಆತಂಕವಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ನಾಯಕತ್ವ ಬುದ್ದಿ ಕಲಿಯಲ್ಲ: ರಾಹುಲ್ ಗಾಂಧಿ ವಿರುದ್ಧ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ
ಕಡೆಗೂ ಮನೆಯವರ ಕಣ್ತಪ್ಪಿಸಿ ಹುಡುಗಿ ಬಂಧನದಿಂದ ಎಸ್ಕೇಪ್ ಆಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಗಿಯ ಮನೆಯವರಿಗೆ ಎಚ್ಚರಿಕೆ ನೀಡಿದ್ದಾರೆ.