ಕಾಂಗ್ರೆಸ್ ನಾಯಕತ್ವ ಬುದ್ದಿ ಕಲಿಯಲ್ಲ: ರಾಹುಲ್ ಗಾಂಧಿ ವಿರುದ್ಧ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ
ಪಂಜಾಬ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕತ್ವ ಎಂದಿಗೂ ಬುದ್ದಿ ಕಲಿಯಲ್ಲ ಎಂದು ಹೀಗಳೆದಿದ್ದಾರೆ.
Published: 11th March 2022 03:22 PM | Last Updated: 11th March 2022 04:21 PM | A+A A-

ಕ್ಯಾಪ್ಟನ್ ಅಮರೀಂದರ್ ಸಿಂಗ್
ಅಮೃತ್ ಸರ: ಪಂಜಾಬ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕತ್ವ ಎಂದಿಗೂ ಬುದ್ದಿ ಕಲಿಯಲ್ಲ ಎಂದು ಹೀಗಳೆದಿದ್ದಾರೆ.
ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದ್ದು, ಇದಕ್ಕೆ ತಮ್ಮ ಆಡಳಿತದ ಅವಧಿಯಲ್ಲಿ ತಮಗಾದ ಅಪಮಾನವೇ ಕಾರಣ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ,
The @INCIndia leadership will never learn!
— Capt.Amarinder Singh (@capt_amarinder) March 11, 2022
Who is responsible for the humiliating defeat of Congress in UP? What about Manipur, Goa, Uttrakhand?
The answer is written in BOLD LETTERS on the wall but as always I presume they will avoid reading it. https://t.co/Dp646fwQgR
ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ 4.5 ವರ್ಷಗಳ ಆಡಳಿತ ವಿರೋಧಿ ಆಡಳಿತದಿಂದಾಗಿ ತಮ್ಮ ಪಕ್ಷವು ಸೋತಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕತ್ವವು "ಎಂದಿಗೂ ಬುದ್ದಿ ಕಲಿಯುವುದಿಲ್ಲ"...ಸೋಲಿಗೆ ಉತ್ತರವನ್ನು ಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ ಆದರೆ ಯಾವಾಗಲೂ ಅವರು ಅದನ್ನು ಓದುವುದನ್ನು ತಪ್ಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆಯಲ್ಲಿ ಆಪ್ ಮುನ್ನಡೆ: ಕಾಂಗ್ರೆಸ್ ಗೆ ಮುಳುವಾಯಿತೇ ಈ ಅಂಶಗಳು?!!
ಸಿಂಗ್ ಅವರು ಪಟಿಯಾಲ ನಗರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋತಿದ್ದು, ಅವರ ಪಕ್ಷವು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.. ಆದರೂ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿತ್ತು.