
ಪುಷ್ಕರ್ ಸಿಂಗ್ ಧಾಮಿ
ಡೆಹ್ರಾಡೂನ್: ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಅವರ ಸಂಪುಟ ಶುಕ್ರವಾರ ರಾಜ್ಯಪಾಲ ಗುರ್ಮಿತ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸಿದೆ.
ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ಹೊಸ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಧಾಮಿ ಅವರನ್ನು ವಿನಂತಿಸಿದರು.
ಇದನ್ನು ಓದಿ: ಉತ್ತರಾಖಂಡದಲ್ಲಿ ಬಹುಮತದತ್ತ ಬಿಜೆಪಿ, ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ದಾಪುಗಾಲು
ಧಾಮಿ ಅವರ ಕ್ಯಾಬಿನೆಟ್ ಸಚಿವರಾದ ಸತ್ಪಾಲ್ ಮಹಾರಾಜ್, ಗಣೇಶ್ ಜೋಶಿ ಮತ್ತು ಸ್ವಾಮಿ ಯತೀಶ್ವರಾನಂದ್ ಸಹ ಜೊತೆಗಿದ್ದರು.
70 ಸದಸ್ಯ ಬಲದ ಉತ್ತರಾಖಂಡ ಬಿಧಾನಸಭೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 19 ಮತ್ತು ಬಿಎಸ್ ಪಿ 2 ಸ್ಥಾನಗಳನ್ನು ಪಡೆದುಕೊಂಡಿದೆ. ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಪಕ್ಷವೊಂದು ಅಧಿಕಾರ ಉಳಿಸಿಕೊಂಡಿರುವುದು ಇದೇ ಮೊದಲು.
ಆದರೆ, ನಿರ್ಗಮಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಾಂಗ್ರೆಸ್ನ ಭುವನ್ ಕಪ್ರಿ ವಿರುದ್ಧ 6,579 ಮತಗಳಿಂದ ಸೋಲು ಅನುಭವಿಸಿದ್ದಾರೆ.