ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ಕಾರಣ ಇತರ ಪಕ್ಷಗಳ ಮೇಲಿನ ಕೋಪ: ರಾಜಕೀಯ ವಿಶ್ಲೇಷಕರು
ಪಂಜಾಬ್ ನಲ್ಲಿ ಸ್ಥಾಪಿತ ರಾಜಕೀಯ ಪಕ್ಷಗಳ ವಿರುದ್ಧ ಜನರ ಆಕ್ರೋಶ, ಜನಪ್ರಿಯ ಕ್ರಮಗಳು ಮತ್ತು ನಾಯಕತ್ವದ ಸ್ಪಷ್ಟತೆ ಎಎಪಿಯ ಗೆಲುವಿಗೆ ಪ್ರಾಥಮಿಕ ಕಾರಣಗಳು. ಆದರೆ ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ...
Published: 12th March 2022 11:09 PM | Last Updated: 12th March 2022 11:09 PM | A+A A-

ಭಗವಂತ್ ಮಾನ್ - ಅರವಿಂದ್ ಕೇಜ್ರಿವಾಲ್
ನವದೆಹಲಿ: ಪಂಜಾಬ್ ನಲ್ಲಿ ಸ್ಥಾಪಿತ ರಾಜಕೀಯ ಪಕ್ಷಗಳ ವಿರುದ್ಧ ಜನರ ಆಕ್ರೋಶ, ಜನಪ್ರಿಯ ಕ್ರಮಗಳು ಮತ್ತು ನಾಯಕತ್ವದ ಸ್ಪಷ್ಟತೆ ಎಎಪಿಯ ಗೆಲುವಿಗೆ ಪ್ರಾಥಮಿಕ ಕಾರಣಗಳು. ಆದರೆ ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಪಕ್ಷಗಳ ಬಗ್ಗೆ ಅತೃಪ್ತಿ ಇಲ್ಲದ ಕಾರಣ ಆಪ್ ಗೆ ಯಶಸ್ಸು ಸಿಗಲಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಎಎಪಿ 117 ಸ್ಥಾನಗಳ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರುತ್ತಿದೆ.
ಇದನ್ನು ಓದಿ: ಪಂಜಾಬ್ ಸಿಎಂ ಆಗಿ ಪ್ರಮಾಣ ಸ್ವೀಕಾರಕ್ಕೂ ಮುನ್ನವೇ ಮಾಜಿ ಸಚಿವರ, ಶಾಸಕರ ಭದ್ರತೆ ಹಿಂಪಡೆದ ಮಾನ್
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಶಿರೋಮಣಿ ಅಕಾಲಿಯ ಹಲವಾರು ಉನ್ನತ ನಾಯಕರು ಈ ಚುನಾವಣೆಯಲ್ಲಿ ಸೋತಿದ್ದಾರೆ.
ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಮಾಜಿ ಮುಖ್ಯಮಂತ್ರಿಗಳಾದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಅಮರಿಂದರ್ ಸಿಂಗ್, ಎಸ್‌ಎಡಿ ನಾಯಕರಾದ ಸುಖಬೀರ್ ಸಿಂಗ್ ಬಾದಲ್ ಮತ್ತು ಬಿಕ್ರಮ್ ಸಿಂಗ್ ಮಜಿಥಿಯಾ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಚುನಾವಣೆಯಲ್ಲಿ ಸೋತಿದ್ದಾರೆ.
ಆದಾಗ್ಯೂ, ಎಎಪಿ ಪಂಜಾಬ್ ಮತ್ತು ದೆಹಲಿಯ ಯಶಸ್ಸನ್ನು ಇತರ ರಾಜ್ಯಗಳಲ್ಲಿ ಗಳಿಸಲು ಸಾಧ್ಯವಾಗಲಿಲ್ಲ. ಗೋವಾದಲ್ಲಿ ಮಾತ್ರ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.
ಪಂಜಾಬ್ ನಲ್ಲಿ ಎಎಪಿಯ ಅದ್ಭುತ ಗೆಲುವಿಗೆ ಹಲವು ಕಾರಣಗಳಿವೆ ಎಂದು ದೆಹಲಿಯ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‌ನ ಸಂಜಯ್ ಕುಮಾರ್ ಅವರು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಎಎಪಿ ಪಡೆದ ಶೇಕಡಾವಾರು ಮತಗಳು ಆಡಳಿತಾರೂಢ ಕಾಂಗ್ರೆಸ್ ಮತ್ತು ಎಸ್‌ಎಡಿ ವಿರುದ್ಧ ಭಾರೀ ಅಸಮಾಧಾನವಿದೆ ಎಂದು ತೋರಿಸುತ್ತದೆ. ಆದರೆ ಜನಪ್ರಿಯ ಕ್ರಮಗಳು ಮತ್ತು ನಾಯಕತ್ವದ ಸ್ಪಷ್ಟತೆ ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ಕಾರಣವಾದ ನಿರ್ಣಾಯಕ ಅಂಶಗಳಾಗಿವೆ ಎಂದು ಕುಮಾರ್ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ನಾಯಕತ್ವ ಅಥವಾ ಜನಪರ ಭರವಸೆಗಳು ಪ್ರಮುಖ ಕಾರಣಗಳಲ್ಲ. "ಅಸ್ತಿತ್ವದಲ್ಲಿರುವ ಆಡಳಿತ ಪಕ್ಷಗಳ ವಿರುದ್ಧದ ಜನಾಕ್ರೋಶ ಎಎಪಿಯ ಸಾಧನೆಯ ಹಿಂದಿನ ಪ್ರಮುಖ ಕಾರಣ" ಎಂದು ರಾಜಕೀಯ ವಿಶ್ಲೇಷಕ ಸುಹಾಸ್ ಪಾಲ್ಶಿಕರ್ ಅವರು ಹೇಳಿದ್ದಾರೆ.