
ಜೆಡಿಯು ಪಕ್ಷದ ಶಾಸಕರು, ಮುಖಂಡರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರ
ಇಂಪಾಲ: ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಬಂದ ನಂತರ ಸರ್ಕಾರ ರಚನೆಗೆ ತಯಾರಿ ನಡೆಸುತ್ತಿರುವ ಬಿಜೆಪಿಗೆ ಜೆಡಿಯುನ ಆರು ಶಾಸಕರು ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಣಿಪುರ ಜನತೆಯ ಹಿತದೃಷ್ಟಿಯಿಂದ ಸರ್ಕಾರ ರಚನೆಗೆ ಬಿಜೆಪಿಗೆ ಬೆಂಬಲ ನೀಡಲು ಜೆಡಿಯು ನಿರ್ಧರಿಸಿದೆ. ಪಕ್ಷದಲ್ಲಿ ಬಂದ ಜನಾದೇಶವನ್ನು ಗೌರವಿಸಲು ಮತ್ತು ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಂತೆ ಬಿಜೆಪಿಗೆ ಮನವಿ ಮಾಡಲು ಬಯಸುವುದಾಗಿ ಜೆಡಿಯು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಪುಷ್ಕರ್ ಸಿಂಗ್ ದಾಮಿ ಅಥವಾ ಹೊಸ ಅಭ್ಯರ್ಥಿಯೇ? ಉತ್ತರಾಖಂಡ ಸಿಎಂ ಹುದ್ದೆಗೆ ಆಯ್ಕೆಯ ಗೊಂದಲದಲ್ಲಿ ಬಿಜೆಪಿ
ಹೊಸದಾಗಿ ಆಯ್ಕೆಯಾದ ಆರು ಶಾಸಕರು ಖುಮುಚ್ಚಮ್ ಜೋಯ್ಕಿಸನ್ ಸಿಂಗ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಪಕ್ಷ ತಿಳಿಸಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡಿದೆ.