'ಕಾಂಗ್ರೆಸ್ ಜೀವ ಕಳೆದುಕೊಂಡ ಪಕ್ಷ, ಯಾವುದೇ ಪ್ರಯೋಜನವಿಲ್ಲ; ಮತಗಳನ್ನು ಕೊಳ್ಳೆ ಹೊಡೆದು ಬಿಜೆಪಿ ಗೆದ್ದಿದೆ'
ಕಾಂಗ್ರೆಸ್ ಪಕ್ಷವನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷಗಳೊಂದಿಗೆ ಬಿಜೆಪಿ ವಿರೋಧಿ ಮೈತ್ರಿ ಮಾಡಿಕೊಳ್ಳುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Published: 12th March 2022 08:57 AM | Last Updated: 12th March 2022 02:41 PM | A+A A-

ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಕಾಂಗ್ರೆಸ್ ಪಕ್ಷವನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷಗಳೊಂದಿಗೆ ಬಿಜೆಪಿ ವಿರೋಧಿ ಮೈತ್ರಿ ಮಾಡಿಕೊಳ್ಳುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರತಿಪಕ್ಷಗಳ ಮೈತ್ರಿಕೂಟ ರಚನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬದಿಗೊತ್ತಲಾಗುವುದು ಎಂದರು. ಆ ಪಕ್ಷ ಜೀವ ಕಳೆದುಕೊಂಡಿದ್ದೂ ಕಾಯುವುದರಲ್ಲಿ ಅರ್ಥವಿಲ್ಲ ಎಂದು ಪ್ರತಿಕ್ರಿಯಿಸಿದರು.
‘ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲ ಸ್ಥಳೀಯ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ಹಿಂದೆ ಕಾಂಗ್ರೆಸ್ ವ್ಯವಸ್ಥಿತವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು. ಆ ಪಕ್ಷ ಈಗ ಎಲ್ಲೆಡೆ ಸೋಲುತ್ತಿದೆ. ಪಕ್ಷದ ನಾಯಕರಿಗೆ ಗೆಲ್ಲುವ ಆಸಕ್ತಿಯೇ ಇಲ್ಲದಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ ಒಂದಾಗುವಂತೆ ಪ್ರಾದೇಶಿಕ ಪಕ್ಷಗಳಿಗೆ ಮಮತಾ ಬ್ಯಾನರ್ಜಿ ಕರೆ
ವಿಶ್ವಾಸಾರ್ಹತೆ ಕಳೆದುಕೊಂಡ ಪಕ್ಷವನ್ನು ಅವಲಂಬಿಸುವುದರಲ್ಲಿ ಅರ್ಥವಿಲ್ಲ. ಬಲಿಷ್ಠವಾಗಿರುವ ಹಲವು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಹೆಚ್ಚು ಶಕ್ತಿಶಾಲಿಯಾಗಬಹುದು ಎಂದರು. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಯುಪಿ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಅಧಿಕಾರವನ್ನು ಮರಳಿ ಪಡೆದಾಗ, ಕಾಂಗ್ರೆಸ್ ಪಂಜಾಬ್ ಕ್ಷೇತ್ರವನ್ನ ಕಳೆದುಕೊಂಡಿದೆ ಎಂದರು.
ಮತಗಳನ್ನು ಕೊಳ್ಳೆ ಹೊಡೆದು ಬಿಜೆಪಿ ಗೆದ್ದಿದೆ.
ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಪ್ರಜಾ ನಿರ್ಣಯ ಪ್ರತಿಬಿಂಬಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಷಾಯ ಮೈತ್ರಿಕೂಟವು ಚುನಾವಣಾ ಯಂತ್ರವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡು ಮತಗಳನ್ನು ಹಾಕಿಸಿಕೊಂಡಿದೆ ಎಂಬ ಆರೋಪವಿದೆ ಹಾಗಾಗಿಯೇ ಸಮಾಜವಾದಿ ಪಕ್ಷವನ್ನು ಸೋಲಿಸಲಾಯಿತು ಎಂದು ಅವರು ಹೇಳಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಮತ್ತೊಮ್ಮೆ ಕರೆ ನೀಡಿದರು. ”ಕೆಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ ಎಂದು ಬಿಜೆಪಿಯವರು ಧ್ವನಿ ಎತ್ತಬಾರದು. ಈ ಗೆಲುವು ಜನಾಭಿಪ್ರಾಯ ಸಂಗ್ರಹಕ್ಕೆ ಸಾಕ್ಷಿಯಲ್ಲ. ಈ ಚುನಾವಣೆಯ ಪರಿಣಾಮ ಸಾರ್ವತ್ರಿಕ ಚುನಾವಣೆ ಮೇಲೆ ಇರುವುದಿಲ್ಲ. ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು ಎಂದರು.