ಫೋನ್ ಕದ್ದಾಲಿಕೆ ಪ್ರಕರಣ: ಸುಮಾರು 2 ಗಂಟೆಗಳ ಕಾಲ ಫಡ್ನವಿಸ್ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
ಫೋನ್ ಕದ್ದಾಲಿಕೆ ಆರೋಪದ ಕೇಸ್ ಗೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಅವರ ಮನೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಅವರ ಹೇಳಿಕೆಯನ್ನು ಬಿಕೆಸಿ ಸೈಬರ್ ಪೊಲೀಸರ ತಂಡ ದಾಖಲಿಸಿಕೊಂಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 13th March 2022 04:52 PM | Last Updated: 13th March 2022 04:53 PM | A+A A-

ದೇವೇಂದ್ರ ಫಡ್ನವಿಸ್
ಮುಂಬೈ: ಫೋನ್ ಕದ್ದಾಲಿಕೆ ಆರೋಪದ ಕೇಸ್ ಗೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಅವರ ಮನೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಅವರ ಹೇಳಿಕೆಯನ್ನು ಬಿಕೆಸಿ ಸೈಬರ್ ಪೊಲೀಸರ ತಂಡ ದಾಖಲಿಸಿಕೊಂಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದಾಗ ರಾಜಕೀಯ ಮುಖಂಡರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸ್ ಇಲಾಕೆಯಲ್ಲಿ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಆರೋಪದ ಬಗ್ಗೆ ಮಹಾರಾಷ್ಟ್ರ ಡಿಜಿಪಿಗೆ ಉದ್ದೇಶಪೂರ್ವಕವಾಗಿ ಆಕೆ ಪತ್ರ ಬರೆದಿದ್ದನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಕೇಸ್ ನಲ್ಲಿ ಹೇಳಿಕೆ ದಾಖಲು ಹಿನ್ನೆಲೆ, ಫಡ್ನವಿಸ್ ನಿವಾಸದ ಹೊರಗಡೆ ಬಿಗಿ ಪೊಲೀಸ್ ಬಂದೋಬಸ್ತ್
ಈ ಪತ್ರದಲ್ಲಿ ತಡೆಹಿಡಿಯಲಾದ ದೂರವಾಣಿ ಕರೆಗಳ ಮಾಹಿತಿಯಿತ್ತು. ಇದು ಅನುಮತಿ ಇಲ್ಲದೆ ಶುಕ್ಲಾ ಫೋನ್ ಕದ್ದಾಲಿಕೆ ಆರೋಪಕ್ಕೊಳಗಾಗಿ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾಯಕರ ನಡುವಿನ ವಾಕ್ ಪ್ರಹಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಫೋನ್ ಕದ್ದಾಲಿಕೆ ಮತ್ತು ವಿಶ್ವಾಸಾರ್ಹ ಮಾಹಿತಿ ಸೋರಿಕೆ ಆರೋಪದಿಂದಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಳೆದ ವರ್ಷ ರಾಜ್ಯ ಗುಪ್ತಚರ ಇಲಾಖೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಡಿಸಿಪಿ ಹೇಮ ರಾಜ್ ಸಿಂಗ್ ರಜಪೂತ್ ಅವರನ್ನೊಳಗೊಂಡ ತಂಡ ಬಾನುವಾರ ಫಡ್ನವಿಸ್ ಮನೆಗೆ ಧಾವಿಸಿ, ಸುಮಾರು ಎರಡು ಗಂಟೆಗಳ ಕಾಲ ಹೇಳಿಕೆ ದಾಖಲಿಸಿಕೊಂಡು ನಂತರ ಅವರ ಮನೆಯಿಂದ ನಿರ್ಗಮಿಸಿದ್ದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.