
ಸಂಸತ್ತು
ನವದೆಹಲಿ: ಸೋಮವಾರದಿಂದ ಎರಡನೇ ಹಂತದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಏಪ್ರಿಲ್ 8ರ ವರೆಗೆ ಅಧಿವೇಶನ ನಡೆಯಲಿದೆ.
ಎರಡನೇ ಹಂತದ ಅಧಿವೇಶನ ನಾಳೆ ಬೆಳಗ್ಗೆ 11 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳ ಕಾರಣ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ನಡೆದಿತ್ತು.
ಇದನ್ನು ಓದಿ: ಈ ವರ್ಷದಲ್ಲಿ ರಾಜ್ಯಸಭೆ ತೊರೆಯಲಿದ್ದಾರೆ ಹಲವಾರು ಸದಸ್ಯರು: ಸಂಕಷ್ಟದಲ್ಲಿ ಬಿಜೆಪಿ!
ಫೆಬ್ರವರಿ ೧ ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೨-೨೩ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದರು. ನಂತರ ಫೆ. ೧೧ರವರೆಗೂ ಮೊದಲ ಹಂತದ ಬಜೆಟ್ ಅಧಿವೇಶನ ನಡೆದಿತ್ತು. ಈಗ 30 ದಿನಗಳ ನಂತರ ಎರಡನೇ ಹಂತದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ.
ಎರಡನೇ ಹಂತದ ಸಂಸತ್ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲೆ ಚರ್ಚೆ ನಡೆದು, ಬಜೆಟ್‌ಗೆ ಅನುಮೋದನೆ ಸಿಗಲಿದೆ. ಇದರ ಜತೆಗೆ ಹಲವು ಮಹತ್ವದ ಮಸೂದೆಗಳೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆಗಳಾಗಲಿವೆ.