ಪಂಜಾಬ್: ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಮುಂದುವರೆಸುತ್ತೇನೆ; ಚನ್ನಿ ಸೋಲಿಸಿದ ಆಪ್ ಎಂಎಲ್ಎ ತಾಯಿಯ ಮಾತು
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಗೆದ್ದು ಶಾಸಕನಾಗಿದ್ದರೂ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕೆಲಸವನ್ನು ಮುಂದುವರೆಸುವುದಾಗಿ ನಿರ್ಗಮಿತ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ವಿರುದ್ಧ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಬ್ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಹೇಳಿದ್ದಾರೆ.
Published: 13th March 2022 12:18 PM | Last Updated: 17th March 2022 07:29 PM | A+A A-

ಆಪ್ ಶಾಸಕ ಲಾಬ್ ಸಿಂಗ್ ಉಗೋಕೆ ಅವರ ತಾಯಿಯ ಚಿತ್ರ
ಬರ್ನಾಲಾ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಗೆದ್ದು ಶಾಸಕನಾಗಿದ್ದರೂ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕೆಲಸವನ್ನು ಮುಂದುವರೆಸುವುದಾಗಿ ನಿರ್ಗಮಿತ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ವಿರುದ್ಧ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಬ್ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಹೇಳಿದ್ದಾರೆ.
ಬಾದೌರ್ ಕ್ಷೇತ್ರದಿಂದ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು 37,550 ಮತಗಳ ಅಂತರದಿಂದ ಸೋಲಿಸಿದ ಉಗೋಕೆ, ಮೊಬೈಲ್ ರಿಪೇರಿ ಮಾಡುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಾವು ಯಾವಾಗಲೂ ಶ್ರಮಪಟ್ಟು ಕೆಲಸ ಮಾಡುತ್ತೇವೆ. ನನ್ನ ಮಗನ ಸ್ಥಾನ ಯಾವುದಾದರೂ, ಶಾಲೆಯನ್ನು ತನ್ನ ಕೆಲಸವನ್ನು ಮುಂದುವರೆಸುವುದಾಗಿ ಕೌರ್ ಹೇಳುತ್ತಾರೆ. ಜಾಧು ನನ್ನ ಜೀವನದ ಪ್ರಮುಖವಾದ ಭಾಗವಾಗಿದೆ. ಮುಖ್ಯಮಂತ್ರಿ ವಿರುದ್ಧ ಸ್ಪರ್ಧೆ ಮಾಡಿದ್ದರೂ, ನನ್ನ ಮಗ ಗೆದ್ದೆ ಗೆಲುತ್ತಾನೆ ಎಂಬ ವಿಶ್ವಾಸ ಯಾವಾಗಲೂ ಇತ್ತು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ಕಾರಣ ಇತರ ಪಕ್ಷಗಳ ಮೇಲಿನ ಕೋಪ: ರಾಜಕೀಯ ವಿಶ್ಲೇಷಕರು
ಉಗೋಕೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ, ಅನೇಕ ಪ್ರಶಸ್ತಿಗಳನ್ನು ತಂದಿದ್ದಾಗಿ ಶಾಲೆಯ ಪ್ರಿನ್ಸಿಪಾಲ್ ಅಮೃತ್ ಪೌಲ್ ಕೌರ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದರು. ಲಾಬ್ ಸಿಂಗ್ ಉಗೋಕೆ ಅವರ ತಾಯಿ ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದು, ಅವರ ಕೆಲಸವನ್ನು ಮುಂದುವರೆಸಲು ಬಯಸುವುದಾಗಿ ಪ್ರಿನ್ಸಿಪಾಲ್ ಹೇಳಿದರು. ಸಿಂಗ್ ತಂದೆ ದರ್ಶನ್ ಸಿಂಗ್, ಕಾರ್ಮಿಕರಾಗಿದ್ದು, ತನ್ನ ಮಗ ಕುಟುಂಬದ ಬದಲಿಗೆ ಜನರ ಕಲ್ಯಾಣದ ಕಡೆಗೆ ಗಮನ ಹರಿಸಬೇಕು ಎಂದರು.
2013ರಲ್ಲಿ ಆಪ್ ಪಕ್ಷ ಸೇರಿದ ಉಗೋಕೆ ತ್ವರಿತಗತಿಯಲ್ಲಿ ಪಕ್ಷದಲ್ಲಿ ಮುಂಚೂಣಿಗೆ ಬಂದರು. 2017ರಲ್ಲಿ ಬಾದೌರ್ ಕ್ಷೇತ್ರದಿಂದ ಎಎಪಿಯಿಂದ ಅವರು ಟಿಕೆಟ್ ಬಯಸಿದ್ದರು. ಆದರೆ, ಪಕ್ಷ ಬೇರೆಯವರನ್ನು ನಿಲ್ಲಿಸಿತ್ತು. ಇದೀಗ ಚನ್ನಿ ವಿರುದ್ಧ ಗೆದ್ದು ಬೀಗುತ್ತಿದ್ದು, ಅವರ ಗ್ರಾಮದಲ್ಲಿ ಸಂತಸ, ಸಂಭ್ರಮವಿದೆ.