ತ್ರಿಪುರಾ: ಪತಿಯ ತಲೆ ಕಡಿದು, ರುಂಡವನ್ನು ದೇವರ ಮುಂದೆ ನೇತು ಹಾಕಿದ ಪತ್ನಿ
ಆಘಾತಕಾರಿ ಘಟನೆಯೊಂದರಲ್ಲಿ 42 ವರ್ಷದ ಮಹಿಳೆಯೊಬ್ಬರು ತನ್ನ 50 ವರ್ಷದ ಪತಿಯ ತಲೆ ಕಡಿದು, ರುಂಡವನ್ನು ತಮ್ಮ ಕುಟುಂಬದ ಪೂಜಾ ಕೊಠಡಿಯ ಮುಂದೆ ನೇತು ಹಾಕಿದ್ದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Published: 13th March 2022 01:05 AM | Last Updated: 13th March 2022 01:05 AM | A+A A-

ಸಾಂದರ್ಭಿಕ ಚಿತ್ರ
ಅಗರ್ತಲಾ: ಆಘಾತಕಾರಿ ಘಟನೆಯೊಂದರಲ್ಲಿ 42 ವರ್ಷದ ಮಹಿಳೆಯೊಬ್ಬರು ತನ್ನ 50 ವರ್ಷದ ಪತಿಯ ತಲೆ ಕಡಿದು, ರುಂಡವನ್ನು ತಮ್ಮ ಕುಟುಂಬದ ಪೂಜಾ ಕೊಠಡಿಯ ಮುಂದೆ ನೇತು ಹಾಕಿದ್ದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಖೋವಾಯ್ನ ರಾಮಚಂದ್ರ ಘಾಟ್ನಲ್ಲಿರುವ ತಮ್ಮ ಮನೆಯಲ್ಲಿ ಪತಿ ರವೀಂದ್ರ ತಂತಿ ಮಲಗಿದ್ದಾಗ ಪತ್ನಿ ಸಾಬಿತ್ರಿ ತಂತಿ 'ದಾವೋ' (ಚೂಪಾದ ಆಯುಧ)ದಿಂದ ತಲೆಯನ್ನು ಕತ್ತರಿಸಿದ್ದಾರೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ದಂಪತಿಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದು, ಪತಿಯ ಬರ್ಬರ ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಹಿಳೆ ಕಳೆದ ಕೆಲವು ವಾರಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಂಡ ಭೇಟಿ ನೀಡಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.