ಕಾಶ್ಮೀರ ಫೈಲ್ಸ್ ಗೆ ಹೆಚ್ಚಿನ ಉತ್ತೇಜನ: ಸ್ಥಳೀಯ ಸಿನಿಮಾಗಳ ಉಳಿವು ಹೇಗೆ?- ನಿರ್ದೇಶಕ ಗುರುರಾಜ್ ಜ್ಯೇಷ್ಠ
ರಾಜ್ಯದಲ್ಲಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತ ಮಾಡಲಾಗಿದೆ. ಕಾಶ್ಮೀರ ಫೈಲ್ಸ್ ಸಿನಿಮಾಗೆ ಮಲ್ಟಿಪ್ಲೆಕ್ಸ್ ಗಳನ್ನು ನೀಡಲಾಗುತ್ತಿದೆ.
Published: 14th March 2022 05:00 PM | Last Updated: 14th March 2022 05:00 PM | A+A A-

ಗುರುರಾಜ್ ಜ್ಯೇಷ್ಠ
ಮಂಗಳೂರು: ರಾಜ್ಯದಲ್ಲಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತ ಮಾಡಲಾಗಿದೆ. ಕಾಶ್ಮೀರ ಫೈಲ್ಸ್ ಸಿನಿಮಾಗೆ ಮಲ್ಟಿಪ್ಲೆಕ್ಸ್ ಗಳನ್ನು ನೀಡಲಾಗುತ್ತಿದ್ದು, ಸ್ಥಳೀಯ ಸಿನಿಮಾಗಳಿಗೆ ಉತ್ತೇಜನ ಸಿಗುತ್ತಿಲ್ಲ ಎಂದು ಉದಯೋನ್ಮುಖ ನಿರ್ದೇಶಕ-ನಿರ್ಮಾಪಕ ಗುರುರಾಜ್ ಜ್ಯೇಷ್ಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುರಾಜ್ ಜ್ಯೇಷ್ಠ ಅವರ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನದ ಅವಕಾಶ ಸಿಗದ ಕಾರಣ ತಮ್ಮ ಚಿತ್ರಕ್ಕೆ ಹಿನ್ನೆಡೆಯುಂಟಾಗುತ್ತಿದೆ ಎಂದು ಗುರುರಾಜ್ ಜ್ಯೇಷ್ಠ ಹೇಳಿದ್ದಾರೆ.
ಗುರುರಾಜ್ ಜ್ಯೇಷ್ಠ ನಿರ್ದೇಶನದ ಹರೀಶ ವಯಸು 36 ಸಿನಿಮಾ 3 ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಟೈಟಲ್ ಟ್ರ್ಯಾಕ್ ಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಕಂಠ ನೀಡಿದ್ದಾರೆ. "ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಗ್ಗೆ ಮಾತನಾಡಿರುವ ಗುರುರಾಜ್ ಮಂಗಳೂರಿನಲ್ಲಿ ಇರುವ ಬೇರೆ ಮಲ್ಟಿಪ್ಲೆಕ್ಸ್ ಗಳು ನನ್ನ ಸಿನಿಮಾ ಶೋಗಳನ್ನು ಮುಂದುವರೆಸಿವೆ, ಆದರೆ ನಗರದಲ್ಲಿರುವ ಪಿವಿಆರ್ ನಲ್ಲಿ ಮಾತ್ರ ನಮ್ಮ ಸಿನಿಮಾದ ಶೋಗಳನ್ನು ರದ್ದುಗೊಳಿಸಿ ಹಿಂದಿ ಸಿನಿಮಾ ದ ಕಾಶ್ಮೀರ ಫೈಲ್ಸ್ ನ ಶೋಗಳನ್ನು ಹೆಚ್ಚುಗೊಳಿಸಿದೆ. ಈ ಹಿಂದಿ ಸಿನಿಮಾ ಕೆಟ್ಟದ್ದು ಎಂದು ನಾನು ಹೇಳುತ್ತಿಲ. ಆದರೆ ಕನ್ನಡೇತರ ಸಿನಿಮಾಗಳಿಗೆ ಹೆಚ್ಚಿನ ಉತ್ತೇಜನ ದೊರೆತರೆ ಪ್ರಾದೇಶಿಕ ಸಿನಿಮಾ (ಕನ್ನಡ ಸಿನಿಮಾಗಳು) ಉಳಿಯುವುದು ಹೇಗೆ" ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಭಜರಂಗದಳ ದ ಕಾಶ್ಮೀರ್ ಫೈಲ್ಸ್ ನ ಶೋ ಗಳನ್ನು ಹೆಚ್ಚಿಸಲು ಆಗ್ರಹಿಸಿದೆ. "ನಾವು ಪ್ರಾದೇಶಿಕ ಸಿನಿಮಾಗಳ ವಿರುದ್ಧವಲ್ಲ, ದ ಕಾಶ್ಮೀರ್ ಫೈಲ್ಸ್ ಸಿನಿಮಾದ ಶೋಗಳನ್ನು ಹೆಚ್ಚಿಸಬೇಕೆಂಬುದೇ ನಮ್ಮ ಆಗ್ರಹ ಎಂದು ಭಜರಂಗದಳದ ನಾಯಕ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.
ಇದೇ ವೇಳೆ ಮಂಗಳೂರು ಪೊಲೀಸರು ದಿ ಕಾಶ್ಮೀರ್ ಫೈಲ್ಸ್ ಪರವಾಗಿ ಗುರ್ಗಾಂವ್ ನಲ್ಲಿ ನಡೆದ ಮಾದರಿಯ ಪ್ರತಿಭಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.