ಕಾಶ್ಮೀರದ ಶೋಪಿಯಾನ್‌ನಲ್ಲಿ ಸಿಆರ್ ಪಿಎಫ್ ಯೋಧನ ಹತ್ಯೆ: ಕೆಲವೇ ಗಂಟೆಗಳಲ್ಲಿ ಇಬ್ಬರ ಬಂಧನ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಪೊಲೀಸರು ದಾಳಿಕೋರರನ್ನು ಭಾನುವಾರ ಬಂಧಿಸಿದ್ದಾರೆ.
Published: 14th March 2022 12:04 AM | Last Updated: 14th March 2022 01:45 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಪೊಲೀಸರು ದಾಳಿಕೋರರನ್ನು ಭಾನುವಾರ ಬಂಧಿಸಿದ್ದಾರೆ.
ಸಿಆರ್ ಪಿಎಫ್ ಸಿಬ್ಬಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಉಗ್ರ ಹಾಗೂ ಒಬ್ಬ ಓವರ್ ಗ್ರೌಂಡ್ ವರ್ಕರ್(ಒಜಿಡಬ್ಲ್ಯು) ಅಥವಾ ಉಗ್ರರ ಸಹಚರನನ್ನು ಸಹ ಬಂಧಿಸಲಾಗಿದೆ ಎಂದು ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್(ಐಜಿಪಿ) ವಿಜಯ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನು ಓದಿ: ಕಾಶ್ಮೀರ: ರಜೆಯಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು
"ನಾವು ಸಿಆರ್ ಪಿಎಫ್ ಸಿಬ್ಬಂದಿಯ ಹಂತಕರನ್ನು ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಪರಾಧದ ಸಂದರ್ಭದಲ್ಲಿ ಉಗ್ರರಿಗೆ ಸಹಕರಿಸಿದ ಒಬ್ಬ ಓವರ್ ಗ್ರೌಂಡ್ ವರ್ಕರ್ ಅನ್ನು ಸಹ ಬಂಧಿಸಲಾಗಿದೆ" ಎಂದು ಐಜಿಪಿ ಟ್ವೀಟ್ ಮಾಡಿದ್ದಾರೆ.
ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಅಬಿದ್ ರಂಜಾನ್ ಶೇಖ್ ನಿರ್ದೇಶನದ ಮೇರೆಗೆ ಈ ಅಪರಾಧ ಎಸಗಲಾಗಿದೆ ಎಂದು ಅವರು ಹೇಳಿದ್ದಾರೆ.
ದಾಳಿಕೋರನನ್ನು ರಂಗಮಾರ್ಗ್-ಸೆಡೋವ್ ನಿವಾಸಿ ಮತ್ತು ಸಕ್ರಿಯ ಭಯೋತ್ಪಾದಕ ರುಖ್ಸಾರ್ ಸಾದಿಕ್ ಥೋಕರ್ ಎಂದು ಗುರುತಿಸಲಾಗಿದೆ. ಆತನ ಬಳಿಯಿದ್ದ ಪಿಸ್ತೂಲನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ನಂತರ ಪೊಲೀಸ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.