ಛತ್ತೀಸ್ಗಢ: ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ನಕ್ಸಲರ ಹತ್ಯೆ - ಪೊಲೀಸರು
ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 15th March 2022 08:57 PM | Last Updated: 15th March 2022 08:57 PM | A+A A-

ಸಂಗ್ರಹ ಚಿತ್ರ
ರಾಯ್ಪುರ: ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಯ್ಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಕಟೆಕಲ್ಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ಗೊರ್ಲಿ-ಮುಥೇಲಿ ಗ್ರಾಮಗಳ ಸಮೀಪವಿರುವ ಕಾಡಿನಲ್ಲಿ ಭದ್ರತಾ ಪಡೆಗಳ ಜಂಟಿ ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರು ಮುಖಾಮುಖಿಯಾಗಿದ್ದರು. ಈ ವೇಳೆ ಎನ್ ಕೌಂಟರ್ ನಡೆದಿತ್ತು ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ) ಸುಂದರರಾಜ್ ಪಿ ಹೇಳಿದರು.
ದಾಂತೇವಾಡ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯಲ್ಲಿರುವ ಜಿಯಾಕೋರ್ತಾ, ಗೊರ್ಲಿ, ಮುಥೇಲಿ ಮತ್ತು ದಾನಿಕೋರ್ತಾ ಗ್ರಾಮಗಳ ಕಾಡುಗಳಲ್ಲಿ ಪೇಡರಸ್, ಮತ್ತು ಮಾವೋವಾದಿಗಳ ಕಾಟೇಕಲ್ಯಾಣ ಪ್ರದೇಶ ಸಮಿತಿ ರಚನೆಗಳ ಕಾರ್ಯಕರ್ತರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.
ಬೆಳಿಗ್ಗೆ 11.30ರ ಸುಮಾರಿಗೆ ಗೊರ್ಲಿ ಮತ್ತು ಮುತೇಲಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಎಂದು ಅವರು ಹೇಳಿದರು. ಗುಂಡಿನ ಚಕಮಕಿ ನಿಂತ ನಂತರ, ಸ್ಥಳದಿಂದ ಇಬ್ಬರು ಮಹಿಳೆಯರ ಮೃತದೇಹಗಳು ಮತ್ತು ಎರಡು 12 ಬೋರ್ ರೈಫಲ್ಗಳು ಮತ್ತು ಒಂದು ದೇಶೀಯಾ ಆಯುಧವನ್ನು ವಶಪಡಿಸಿಕೊಳ್ಳಲಾಯಿತು ಎಂದರು.
ಆರಂಭಿಕವಾಗಿ ಮೃತರಲ್ಲಿ ಒಬ್ಬನನ್ನು ಪೆಡರಸ್ LOS ಕಮಾಂಡರ್ ಮಂಜುಳಾ ಎಂದು ಗುರುತಿಸಲಾಗಿದೆ. ಇನ್ನೊಬ್ಬನನ್ನು ರಕ್ಷಣಾ ತಂಡದ ಸದಸ್ಯ ಗಂಗಿ ಪುಣೆಂ ಎಂದು ಗುರುತಿಸಲಾಗಿದೆ.