ನೀಟ್ ವಿರೋಧಿ ಮಸೂದೆ ರಾಷ್ಟ್ರಪತಿಗೆ ಕಳುಹಿಸಲಾಗುವುದು: ತಮಿಳುನಾಡು ಸಿಎಂಗೆ ರಾಜ್ಯಪಾಲರ ಭರವಸೆ
ಇತ್ತೀಚೆಗೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ನೀಟ್ ವಿರೋಧಿ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಮಂಗಳವಾರ...
Published: 15th March 2022 10:47 PM | Last Updated: 16th March 2022 02:13 PM | A+A A-

ರಾಜ್ಯಪಾಲ ಆರ್.ಎನ್.ರವಿ
ಚೆನ್ನೈ: ಇತ್ತೀಚೆಗೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ನೀಟ್ ವಿರೋಧಿ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಭರವಸೆ ನೀಡಿದ್ದಾರೆ.
ಸಿಎಂ ಸ್ಟಾಲಿನ್ ಅವರು ಇಂದು ರಾಜಭವನಕ್ಕೆ ಭೇಟಿ ನೀಡಿ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಿಂದ ತಮಿಳುನಾಡಿಗೆ ವಿನಾಯಿತಿ ನೀಡುವ ಮಸೂದೆಯನ್ನು ತ್ವರಿತವಾಗಿ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸುವಂತೆ ಒತ್ತಾಯಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದನ್ನು ಓದಿ: ವಿಶೇಷ ಅಧಿವೇಶನದಲ್ಲಿ ಮತ್ತೊಮ್ಮೆ ನೀಟ್ ಮಸೂದೆ ಅಂಗೀಕರಿಸಿದ ತಮಿಳುನಾಡು, ರಾಜ್ಯಪಾಲರಿಗೆ ರವಾನೆ
ಫೆಬ್ರವರಿ 8 ರಂದು, ತಮಿಳುನಾಡು ವಿಧಾನಸಭೆಯು ಮತ್ತೊಮ್ಮೆ NEET ವಿರೋಧಿ ಮಸೂದೆಯನ್ನು ಅಂಗೀಕರಿಸಿತು ಮತ್ತು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲು ರಾಜಭವನಕ್ಕೆ ರವಾನಿಸಿದೆ.
ಡಿಎಂಕೆ ಸರ್ಕಾರ ಸೆಪ್ಟೆಂಬರ್ 13, 2021 ರಂದು ಅಂಗೀಕರಿಸಿದ ಹಿಂದಿನ ನೀಟ್ ವಿರೋಧಿ ಮಸೂದೆಯನ್ನು 142 ದಿನಗಳ ನಂತರ ರಾಜ್ಯಪಾಲ ರವಿ ಅವರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.