
ಹಿಜಾಬ್ ನಲ್ಲಿರುವ ಮಹಿಳೆಯರು
ನವದೆಹಲಿ: ಹಿಜಾಬ್ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿಗೆ ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಪ್ರತಿಕ್ರಿಯೆ ನೀಡಿವೆ.
ಹಿಜಾಬ್ ವಿಷಯ ಧಾರ್ಮಿಕ ವಿಷಯಕ್ಕೆ ಅಷ್ಟೇ ಅಲ್ಲದೇ ಆಯ್ಕೆಯ ಸ್ವಾತಂತ್ರ್ಯಕ್ಕೂ ಸಂಬಂಧಿಸಿದ್ದಾಗಿದೆ. ಆದರೆ ಹೈಕೋರ್ಟ್ ನ ನಿರ್ಧಾರ ತೀವ್ರ ನಿರಾಶೆ ಮೂಡಿಸಿದೆ ಎಂದು ಮೆಹೆಬೂಬಾ ಮುಫ್ತಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ; ಸರ್ಕಾರದ ಆದೇಶ ಕಾನೂನುಬದ್ಧ: ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ
Karnataka High Court upholds decision on #HijabBan. The already growing imbalance in country further erodes individual's belief in the idea of India & is impacting democracy. The resulting fatalism causes maximum people to give up on democracy, & alienation grows further.
— J&K People’s Conference (@JKPC_) March 15, 2022
ಈ ನಡುವೆ ಜಮ್ಮು-ಕಾಶ್ಮೀರದ ಮತ್ತೋರ್ವ ನಾಯಕ ಸಾಜದ್ ಲೋನ್ ನೇತೃತ್ವದ ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಟ್ವೀಟ್ ಮಾಡಿದ್ದು, ಈಗಾಗಲೇ ದೇಶದಲ್ಲಿ ಅಸಮತೋಲನ ಬೆಳೆಯುತ್ತಿದೆ. ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಭಾರತದೆಡೆಗಿನ ಕಲ್ಪನೆಯನ್ನು ಸೆವೆಸುತ್ತಿದೆ ಇದು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿದೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ ಪರಕೀಯತೆ ಭಾವನೆಯನ್ನು ಹೆಚ್ಚು ಮಾಡುತ್ತದೆ ಎಂದು ಪೀಪಲ್ಸ್ ಕಾನ್ಫರೆನ್ಸ್ ಹೇಳಿದೆ.