ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಲ್ಲ; ಗಾಂಧಿಗಳು ಸ್ವಯಂಪ್ರೇರಣೆಯಿಂದ ದೂರ ಸರಿಯಬೇಕು: ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದನ್ನು ಕಂಡು ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದರು.
Published: 15th March 2022 02:54 PM | Last Updated: 18th March 2022 05:23 PM | A+A A-

ರಾಹುಲ್ ಗಾಂಧಿ-ಕಪಿಲ್ ಸಿಬಲ್
ಕೋಲ್ಕತ್ತಾ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದನ್ನು ಕಂಡು ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದರು.
'ಗಾಂಧಿಗಳು ಸ್ವಯಂಪ್ರೇರಣೆಯಿಂದ ದೂರ ಸರಿಯಬೇಕು ಏಕೆಂದರೆ ನಾಮನಿರ್ದೇಶನಗೊಂಡ ಸಂಸ್ಥೆಯು ಅವರು ಅಧಿಕಾರದ ಹಿಡಿತವನ್ನು ಮುಂದುವರಿಸಬಾರದು ಎಂದು ಅವರಿಗೆ ಎಂದಿಗೂ ಹೇಳುವುದಿಲ್ಲ' ಎಂದು ಹೇಳಿದರು.
ರಾಹುಲ್ ಗಾಂಧಿಯನ್ನು ಪಕ್ಷದ ಮುಖ್ಯಸ್ಥರಾಗಿ ಹಿಂತಿರುಗಿಸಲು ಹೆಚ್ಚುತ್ತಿರುವ ಬೇಡಿಕೆಯ ಕುರಿತು ಕೇಳಿದಾಗ, ಕಪಿಲ್ ಸಿಬಲ್, ರಾಹುಲ್ ಗಾಂಧಿ ಈಗಾಗಲೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ 'ವಾಸ್ತವ ಅಧ್ಯಕ್ಷ' ಎಂದು ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಬಹುದಿತ್ತು, ಆದರೆ ಅವರು ತಿರಸ್ಕರಿಸಿದರು: ಮೊಯ್ಲಿ
'ರಾಹುಲ್ ಗಾಂಧಿ ಪಂಜಾಬ್ಗೆ ಹೋಗಿ ಚರಣ್ ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದರು. ಅವರು ಯಾವ ಸಾಮಥ್ರ್ಯದ ಮೇಲೆ ಈ ರೀತಿಯಾಗಿ ಘೋಷಿಸಿದರು? ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಲ್ಲ, ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಈಗಾಗಲೇ ವಾಸ್ತವಿಕ ಅಧ್ಯಕ್ಷರಾಗಿದ್ದಾರೆ. ಹಾಗಿರುವಾಗ ಅವರು ಅಧಿಕಾರದ ಹಿಡಿತವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಏಕೆ ಕೇಳುತ್ತಿದ್ದಾರೆ? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು.
ನನ್ನ ಕೊನೆಯ ಉಸಿರು ಇರುವವರೆಗೂ 'ಸಬ್ ಕಿ ಕಾಂಗ್ರೆಸ್' ಗಾಗಿ ಹೋರಾಡುತ್ತೇನೆ. ಈ 'ಸಬ್ ಕಿ ಕಾಂಗ್ರೆಸ್' ಎಂದರೆ ಭಾರತದಲ್ಲಿ ಬಿಜೆಪಿ ಬೇಡದ ಎಲ್ಲ ಜನರನ್ನು ಒಟ್ಟುಗೂಡಿಸುವುದು.