15 ಕೋಟಿ ಜನರಿಗೆ ಭರ್ಜರಿ ಸುದ್ದಿ: ಲೋಕಸಭೆ ಚುನಾವಣೆವರೆಗೂ ಉಚಿತ ಪಡಿತರ ವಿತರಿಸಲು ಸಿದ್ಧತೆ ನಡೆಸಿದ ಯೋಗಿ ಸರ್ಕಾರ!
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿ ರಾಜ್ಯದ 15 ಕೋಟಿ ಬಡವರಿಗೆ ಭರ್ಜರಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ.
Published: 16th March 2022 09:16 PM | Last Updated: 17th March 2022 01:44 PM | A+A A-

ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿ ರಾಜ್ಯದ 15 ಕೋಟಿ ಬಡವರಿಗೆ ಭರ್ಜರಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ.
ಹೊಸ ಬಿಜೆಪಿ ಸರ್ಕಾರ ತನ್ನ ಉಚಿತ ಪಡಿತರ ವಿತರಣೆ ಯೋಜನೆಯನ್ನು 2024ರ ಲೋಕಸಭೆ ಚುನಾವಣೆಯವರೆಗೆ ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಸಂಬಂಧ ಆಹಾರ ಮತ್ತು ಜಾರಿ ಇಲಾಖೆ ತನ್ನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಉತ್ತರಪ್ರದೇಶದಲ್ಲಿ ಕೊರೋನಾ ಸಮಯದಲ್ಲಿ ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಅದು 2021ರ ನವೆಂಬರ್ ರವರೆಗೆ ಮುಂದುವರಿಯುತ್ತದೆ. ಆದಾಗ್ಯೂ, ವಿಧಾನಸಭಾ ಚುನಾವಣೆಗಳು ಮತ್ತು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರ ಆದಾಯದ ಮೇಲೆ ಪರಿಣಾಮ ಬೀರುವ ದೃಷ್ಟಿಯಿಂದ, ಯೋಗಿ ಸರ್ಕಾರವು ಈ ಯೋಜನೆಯನ್ನು 2022ರ ಮಾರ್ಚ್ ಅಂತ್ಯದವರೆಗೆ ಮುಂದುವರೆಸುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ: ಪ್ರಧಾನಿ ಮೋದಿ ವಿಶ್ವಾಸ
ಈ ಯೋಜನೆಯಡಿಯಲ್ಲಿ, ಯುಪಿ ಸರ್ಕಾರವು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಮತ್ತು ಅರ್ಹ ಗೃಹ ಕಾರ್ಡ್ ಹೊಂದಿರುವವರಿಗೆ ಪ್ರತಿ ಯೂನಿಟ್‌ಗೆ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಇದಲ್ಲದೆ ಒಂದು ಲೀಟರ್ ಎಣ್ಣೆ ಮತ್ತು ಉಪ್ಪನ್ನು ಸಹ ಉಚಿತವಾಗಿ ನೀಡಲಾಗುತ್ತದೆ.
ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿಂದೆ ಉಚಿತ ಪಡಿತರ ಯೋಜನೆ ದೊಡ್ಡ ಪರಿಣಾಮ ಎಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಈ ಯೋಜನೆಯನ್ನು 2024ರ ಲೋಕಸಭೆ ಚುನಾವಣೆವರೆಗೂ ವಿಸ್ತರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.