'ಮಿಷನ್ 2024': ಅಮಿತ್ ಶಾಗೆ ಉತ್ತರ ಪ್ರದೇಶ ಸರ್ಕಾರ ರಚನೆಯ ಸಾರಥ್ಯ
ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವೀಕ್ಷಕರನ್ನಾಗಿ ನೇಮಿಸಲು ಸಾಕಷ್ಟು ಕಾರಣಗಳಿವೆ. 2014 ರಿಂದ ಪಕ್ಷದ ಚುನಾವಣಾ ಭವಿಷ್ಯವನ್ನು ಹೆಚ್ಚಿಸುತ್ತಿರುವ ಬಿಜೆಪಿಯ...
Published: 16th March 2022 07:31 PM | Last Updated: 16th March 2022 07:31 PM | A+A A-

ಅಮಿತ್ ಶಾ
ಲಖನೌ: ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವೀಕ್ಷಕರನ್ನಾಗಿ ನೇಮಿಸಲು ಸಾಕಷ್ಟು ಕಾರಣಗಳಿವೆ. 2014 ರಿಂದ ಪಕ್ಷದ ಚುನಾವಣಾ ಭವಿಷ್ಯವನ್ನು ಹೆಚ್ಚಿಸುತ್ತಿರುವ ಬಿಜೆಪಿಯ ಮುಖ್ಯ ಚುನಾವಣಾ ತಂತ್ರಗಾರ ಅಮಿತ್ ಶಾ ಅವರು ಉತ್ತರ ಪ್ರದೇಶ ರಾಜಕೀಯವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಅವಧಿಗೆ ಮಾರ್ಗಸೂಚಿಯನ್ನು ರಚಿಸುವ ಜವಾಬ್ದಾರಿಯನ್ನು ಅಮಿತ್ ಶಾ ಅವರಿಗೆ ಮತ್ತೆ ವಹಿಸಲಾಗಿದೆ. ಇದು 'ಮಿಷನ್ 2024' ಟೆಂಪ್ಲೇಟ್ ಆಗಿ ಕಾರ್ಯನಿರ್ವಹಿಸಲಿದೆ.
ಇದನ್ನು ಓದಿ: ಸರ್ಕಾರ ರಚನೆ: ಉತ್ತರ ಪ್ರದೇಶ, ಉತ್ತರಾಖಂಡ ವೀಕ್ಷಕರಾಗಿ ಅಮಿತ್ ಶಾ, ರಾಜನಾಥ್ ಸಿಂಗ್ ನೇಮಕ
2024ರ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, 2014 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಶಾ ಅವರ ಸಾರಥ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ಹೊಸ ಸಂಪುಟ ರಚನೆಯಾಗಲಿದೆ.
ಅಮಿತ್ ಶಾ ಅವರು ಯುಪಿಯ ರಾಜಕೀಯ ನಾಡಿಮಿಡಿತವನ್ನು ಬೇರೆಯವರಿಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಪಕ್ಷದ ಸಂಸದೀಯ ಮಂಡಳಿಯು ಶಾ ಅವರಿಗೆ ಉಪಿ ಸರ್ಕಾರ ರಚನೆಯ ಸಾರಥ್ಯ ನೀಡಿದೆ. ವಾಸ್ತವವಾಗಿ, ಈ ಬಾರಿ ಮತ್ತೊಮ್ಮೆ, ಅಮಿತ್ ಶಾ ಅವರು ಯುಪಿ ಕ್ಯಾಬಿನೆಟ್ 2.0 ನಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಪಾಡುವ ಮೂಲಕ ಅಭಿವೃದ್ಧಿ, ವಿತರಣೆ ಮತ್ತು ಸಮಾನ ಪ್ರಾತಿನಿಧ್ಯವನ್ನು ಮುಂದುವರಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ವಿವರಿಸಿದ್ದಾರೆ.