ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಂತಿದೆ, ಆದರೆ...: ಸಿಆರ್ ಪಿಎಫ್ ಡಿಜಿ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 370 ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟ ಸಂಪೂರ್ಣ ನಿಂತಿದೆ ಎಂದು ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಹೇಳಿದ್ದಾರೆ.
Published: 17th March 2022 03:10 PM | Last Updated: 17th March 2022 03:10 PM | A+A A-

ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 370 ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟ ಸಂಪೂರ್ಣ ನಿಂತಿದೆ ಎಂದು ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಹೇಳಿದ್ದಾರೆ.
It is not as if the situation is out of hand. After the abrogation of Article 370, the incidents of stone-pelting are almost nill. There is a decrease in the infiltration of foreign terrorists and attacks: DG CRPF Kuldiep Singh on the security situation in Jammu and Kashmir pic.twitter.com/3qAOosa5U4
— ANI (@ANI) March 17, 2022
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಟಿಕಲ್ 370 ರದ್ಧತಿ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಕುರಿತು ಅವರು ಮಾಹಿತಿ ನೀಡಿದರು. ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 370 ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಕಲ್ಲು ತೂರಾಟ ಸಂಪೂರ್ಣ ನಿಂತಿದೆ. ಆದರೆ ಪಾಕಿಸ್ತಾನದಿಂದ ಒಳನುಸುಳಿ ಬರುತ್ತಿರುವ ಉಗ್ರರ ಒಳನುಸುಳುವಿಕೆ ಮತ್ತು ದಾಳಿ ಮುಂದುವರೆದಿದ್ದು, ಈ ಪ್ರಮಾಣ ಕೂಡ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಭದ್ರತಾ ಪರಿಸ್ಥಿತಿ ಕುರಿತು ಅವರು ಮಾಹಿತಿ ನೀಡಿದರು.
Under financial assistance from risk fund, ex gratia for personnel martyred in action has been increased to Rs 30 lakhs from Rs 20 lakhs and for all other cases, the ex gratia has been increased to Rs 20 lakhs from Rs 15 lakhs: DG CRPF Kuldiep Singh pic.twitter.com/9trDxj9WqX
— ANI (@ANI) March 17, 2022
ಕಾಶ್ಮೀರದಲ್ಲಿ ಪರಿಸ್ಥಿತಿ ಕೈ ಮೀರಿದೆ ಅಂತಲ್ಲ. ಆರ್ಟಿಕಲ್ 370 ರದ್ದಾದ ನಂತರ, ಕಲ್ಲು ತೂರಾಟದ ಘಟನೆಗಳು ಬಹುತೇಕ ಶೂನ್ಯವಾಗಿವೆ. ವಿದೇಶಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ದಾಳಿಯಲ್ಲೂ ಇಳಿಕೆಯಾಗಿದೆ ಎಂದು ಹೇಳಿದರು.
Till now in the year 2022, 10 personnel have died by suicide. We are taking various steps to address mental stress incl organizing 'Chaupal' where personnel share their problems and we try to solve them. If we are unable to solve it then we take it to the professionals: DG CRPF pic.twitter.com/CHp8w6jGBP
— ANI (@ANI) March 17, 2022
ಇದೇ ವೇಳೆ ಸಿಆರ್ ಪಿಎಫ್ ಕುರಿತು ಮಾತನಾಡಿದ ಅವರು, ಅಪಾಯ ನಿಧಿಯಿಂದ ಆರ್ಥಿಕ ಸಹಾಯದ ಅಡಿಯಲ್ಲಿ, ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಗೆ ಎಕ್ಸ್ ಗ್ರೇಷಿಯಾವನ್ನು (ಪರಿಹಾರ ಧನ) ರೂ 20 ಲಕ್ಷದಿಂದ ರೂ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ ಮತ್ತು ಇತರ ಎಲ್ಲಾ ಪ್ರಕರಣಗಳಿಗೆ ಎಕ್ಸ್ ಗ್ರೇಷಿಯಾವನ್ನು ರೂ 15 ಲಕ್ಷದಿಂದ ರೂ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ 2022 ರಲ್ಲಿ ಇಲ್ಲಿಯವರೆಗೆ, 10 ಸಿಬ್ಬಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಮಾನಸಿಕ ಒತ್ತಡವನ್ನು ಪರಿಹರಿಸಲು ನಾವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಇದರಲ್ಲಿ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ 'ಚೌಪಾಲ್' ಅನ್ನು ಆಯೋಜಿಸುತ್ತೇವೆ ಮತ್ತು ನಾವು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ನಮಗೆ ಅದನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ನಾವು ಅದನ್ನು ವೃತ್ತಿಪರರ ಬಳಿಗೆ ತೆಗೆದುಕೊಂಡುಹೋಗುತ್ತೇವೆ ಎಂದು ಸಿಆರ್ಪಿಎಫ್ ಡಿಜಿ ಕುಲ್ದೀಪ್ ಸಿಂಗ್ ಹೇಳಿದರು.
A total of 41 VIPs were provided security cover by the CRPF during recently concluded Assembly elections in five states. The security of 27 protectees have been withdrawn post elections: DG CRPF Kuldiep Singh pic.twitter.com/uMpemCJRhg
— ANI (@ANI) March 17, 2022
ಐದು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆ ವೇಳೆ ಒಟ್ಟು 41 ವಿಐಪಿಗಳಿಗೆ ಸಿಆರ್ಪಿಎಫ್ನಿಂದ ಭದ್ರತೆ ಒದಗಿಸಲಾಗಿತ್ತು. ಚುನಾವಣೆಯ ನಂತರ 27 ಮಂದಿಯ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.